Kannada NewsKarnataka News
ಜಮೀನು ವಿವಾದ ವೃದ್ಧನ ಕೊಲೆ

ಪ್ರಗತಿ ವಾಹಿನಿ ಸುದ್ದಿ, ಬೆಳಗಾವಿ: ಜಮೀನು ವಿವಾದದ ಕಾರಣಕ್ಕೆ ವೃದ್ಧರೊಬ್ಬರನ್ನು ಧಾರುಣವಾಗಿ ಕೊಲೆ ಮಾಡಿದ ಘಟನೆ ಯಮಕನಮರಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಹೊಸೂರು ಗ್ರಾಮದ ಸಂಕಣ್ಣ ಯರ್ನಾಳ (80) ಕೊಲೆಗೀಡಾದವರು. ಶ್ರೀಕಾಂತ ಬೀರಪ್ಪ ಯರ್ನಾಳ ಕೊಲೆ ಮಾಡಿದ ಆರೋಪಿ.
ಆರೋಪಿ ಮತ್ತು ಕೊಲೆಗೀಡಾದವರ ನಡುವೆ ಜಮೀನಿಗೆ ಸಂಬಂಧಪಟ್ಟಂತೆ ಗಡಿ ವ್ಯಾಜ್ಯವಿದ್ದು ಕೊಲೆಗೆ ಕಾರಣ ಎನ್ನಲಾಗಿದೆ. ಯಮಕನಮರಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
*ವಿಧಾನಸೌಧ ಶಾಪಿಂಗ್ ಮಾಲ್ನಂತಾಗಿದೆ; ಸಚಿವರೆಲ್ಲ ಅಂಗಡಿ ತೆರೆದು ಕುಳಿತಿದ್ದಾರೆ*
https://pragati.taskdun.com/vidhanasoudha10-5-lakhcongresstweetd-k-shivakumar/



