Kannada NewsLatestWorld
*ಆಸ್ಪತ್ರೆಯಲ್ಲಿ ಎಸಿ ಕಂಪ್ರೇಸರ್ ಸ್ಫೋಟ: 15 ನವಜಾತ ಶಿಶುಗಳು ಸಾವು*

ಪ್ರಗತಿವಾಹಿನಿ ಸುದ್ದಿ: ಆಸ್ಪತ್ರೆಯೊಂದರಲ್ಲಿ ಎಸಿ ಕಂಪ್ರೆಸರ್ ಸ್ಫೋಟಗೊಂಡು 15 ನವಜಾತ ಶಿಶುಗಳು ಸಾಅವನ್ನಪ್ಪಿರುವ ಘೋರ ಘಟನೆ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ ನಲ್ಲಿ ನಡೆದಿದೆ.
ಪಾಕಿಸ್ತಾನ ವೈದ್ಯಕೀಯ ವಿಜ್ಞಾನ ಸಂಸ್ಥೆಯ (PIMS) ಸ್ತ್ರೀರೋಗ ಶಾಸ್ತ್ರ ವಾರ್ಡ್ನಲ್ಲಿ ಈ ಘಟನೆ ನಡೆದಿದೆ. ಮೂಲಗಳ ಪ್ರಕಾರ, ಆಸ್ಪತ್ರೆಯ ನರ್ಸರಿಯಲ್ಲಿ ಹವಾನಿಯಂತ್ರಣ (ಎಸಿ) ಕಂಪ್ರೆಸರ್ ಸ್ಫೋಟದಿಂದ ಬೆಂಕಿ ಕಾಣಿಸಿಕೊಂಡಿದೆ. ಘಟನೆಯಲ್ಲಿ 15 ಕಂದಮ್ಮಗಳು ಸಾವನ್ನಪ್ಪಿದ್ದಾರೆ.
ಪಿಐಎಂಎಸ್ ಅಧಿಕಾರಿಗಳ ಪ್ರಕಾರ, ಘಟನೆಯ ವೇಳೆ ನರ್ಸರಿಯಲ್ಲಿ 16 ನವಜಾತ ಶಿಶುಗಳಿದ್ದವು. ಅವುಗಳಲ್ಲಿ 15 ಸಾವನ್ನಪ್ಪಿದ್ದು, ಒಂದೇ ಒಂದು ಮಗು ಬದುಕುಳಿದಿದೆ.
ಬೆಂಕಿಯ ಅವಘಡ ಸುದ್ದಿ ತಿಳಿದ ತಕ್ಷಣ ರಕ್ಷಣಾ ಕಾರ್ಯಾಚರಣೆ ಪ್ರಾರಂಭಿಸಲಾಗಿತ್ತು. ಸ್ತ್ರೀರೋಗ ಶಾಸ್ತ್ರ ವಾರ್ಡ್ನಿಂದ ನವಜಾತ ಶಿಶುಗಳನ್ನು ಸ್ಥಳಾಂತರಿಸಲಾಗಿತ್ತು. ಆದಾಗ್ಯೂ ಒಂದೇ ಒಂದು ಮಗುವನ್ನು ಮಾತ್ರ ಉಳಿಸಲು ಸಾಧ್ಯವಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.




