Latest

ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಗೆ ಇಡಿ ನೊಟೀಸ್

ಪ್ರಗತಿವಾಹಿನಿ ಸುದ್ದಿ; ಮುಂಬೈ: ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಗೆ ಸಂಕಷ್ಟ ಎದುರಾಗಿದ್ದು, 200 ಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿದೆ.

ಅಕ್ರಮ ಹಣ ವರ್ಗಾವಣೆ, ಉದ್ಯಮಿಗಳಿಗೆ 200 ಕೋಟಿ ವಂಚನೆ ಪ್ರಕರಣದ ಪ್ರಮುಖ ಆರೋಪಿ ಸುಕೇಶ್ ಚಂದ್ರಶೇಖರ್ ಜತೆ ಜಾಕ್ವೆಲಿನ್ ಆಪ್ತವಾಗಿರುವ ಫೋಟೋಗಳು ವೈರಲ್ ಆಗಿದ್ದು, ಆರೋಪಿ ಜತೆ ಸಂಪರ್ಕದಲ್ಲಿರುವ ವಿಚಾರಕ್ಕೆ ಸಂಬಂಧಿಸಿದಂತೆ ಡಿ.8ರಂದು ವಿಚಾರಣೆಗೆ ಹಾಜರಾಗುವಂತೆ ಜಾಕ್ವೆಲಿನ್ ಗೆ ಇಡಿ ನೋಟೀಸ್ ನೀಡಿದೆ.

Home add -Advt

ಜಾಕ್ವೆಲಿನ್ ಜತೆ ಆರೋಪಿ ಸುಕೇಶ್ ಹಲವು ಬಾರಿ ದೂರವಾಣಿ ಸಂಭಾಷಣೆ ನಡೆಸಿರುವ ಬಗ್ಗೆಯೂ ಇಡಿ ಅಧಿಕಾರಿಗಳಿಗೆ ಮಾಹಿತಿ ಲಭ್ಯವಾಗಿದ್ದು, ಇಬ್ಬರ ನಡುವೆ ಹಣದ ವ್ಯವಹಾರವಿದೆಯೇ? ವಂಚನೆ ಪ್ರಕರಣದಲ್ಲಿ ಜಾಕ್ವೆಲಿನ್ ಪಾತ್ರವೇನು ಎಂಬ ಬಗ್ಗೆ ಹೆಚ್ಚಿನ ವಿಚಾರಣೆಗಾಗಿ ಇಡಿ ನೋಟೀಸ್ ನೀಡಿದೆ.

ಫೋಟೋಶೂಟ್ ವೇಳೆ ಖಾಸಗಿ ಅಂಗ ಪ್ರದರ್ಶನ; ಮುಜುಗರಕ್ಕೀಡಾದ ನಟಿ

Related Articles

Back to top button