Latest

ಈ ದೃಶ್ಯ ನೋಡಿದರೆ ಬಿಜೆಪಿ ಎಂತಾ ಸ್ಥಿತಿ ತಲುಪಿದೆ ತಿಳಿಯುತ್ತದೆ; HDK ವಾಗ್ದಾಳಿ

ಪ್ರಗತಿವಾಹಿನಿ ಸುದ್ದಿ; ಹಾಸನ: ನಿನ್ನೆ ರಾಜ್ಯಕ್ಕೆ ಆಗಮಿಸಿದ್ದ ಪ್ರಧಾನಿ ನರೆಂದ್ರ ಮೋದಿಯವರನ್ನು ಫೈಟರ್ ರವಿ ರೌಡಿಶೀಟರ್ ಭೇಟಿಯಾಗಿರುವುದು ಹಾಗೂ ರೌಡಿಗೆ ಪ್ರಧಾನಿ ಮೋದಿ ಕೈಮುಗಿದಿರುವುದು ವಿಪಕ್ಷಗಳ ವಾಗ್ದಾಳಿಗೆ ಕಾರಣವಾಗಿದೆ.

ಈ ಬಗ್ಗೆ ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ, ಪ್ರಧಾನಿ ನರೇಂದ್ರ ಮೋದಿ ರೌಡಿ ರವಿಗೆ ತಲೆ ಭಾಗುವ ಮೂಲಕ ಭೂಗತ ದೊರೆಗಳಿಗೆ ಬಿಜೆಪಿ ಮಣೆ ಹಾಕುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಗುಡುಗಿದ್ದಾರೆ.

Related Articles

ನಿನ್ನೆ ಪ್ರಧಾನಿ ಮೋದಿ ಡಾನ್ ಮುಂದೆ ತಲೆ ಬಾಗಿದ್ದಾರೆ. ಈ ದೃಶ್ಯ ನೋಡಿದರೆ ಬಿಜೆಪಿಯ ಸ್ಥಿತಿ ತಿಳಿಯುತ್ತದೆ. ಬಿಜೆಪಿ ದೈನೇಸಿ ಸ್ಥಿತಿಗೆ ತಲುಪಿರೋದಿಕ್ಕೆ ಇದೇ ಸಾಕ್ಷಿ. ಕ್ರಿಕೆಟ್ ಬೆಟ್ಟಿಂಗ್ ನಡೆಸುವವನಿಗೆ ಪ್ರಧಾನಿ ಮೋದಿ ಕೈ ಮುಗಿದಿದ್ದಾರೆ. ಇದು ನಾಚಿಕೆಗೇಡಿನ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Home add -Advt

Related Articles

Back to top button