Latest

ಕೋಟ್ಯಾಂತರ ಬೆಲೆಯ ಕಾರ್ ಖರೀದಿಸಿದ ದಿನವೇ ಅಪಘಾತ: ಉದ್ಯಮಿ ಸಾವು

 ಅಥೆನ್ಸ್‌: ಉದ್ಯಮಿಯೊಬ್ಬರು ೩ ಕೋಟಿಗೂ ಅಧಿಕ ಬೆಲೆಯ ಕಾರ್ ಖರೀದಿಸಿ ಅದೇ ದಿನ ಅಪಘಾತದಲ್ಲಿ ಮೃತಪಟ್ಟ ಘಟನೆ ಗ್ರೀಸ್‌ನ ರಾಜಧಾನಿ ಅಥೆನ್ಸ್‌ನಲ್ಲಿ ನಡೆದಿದೆ.

ಗ್ರೀಸ್‌ನ ಗಾರ್ಮೆಂಟ್ಸ್ ಉದ್ಯಮಿ ಟ್ವೋರ್ಟಜೆಸ್ ಮೊನೊಯೊಯೋಸ್ (೪೭) ಮೃತಪಟ್ಟ ದುರ್ದೈವಿ. ಬೆಳಗ್ಗೆಯಷ್ಟೇ ದುಬಾರಿ ಬೆಲೆಯ ಐಷಾರಾಮಿ ಕಾರ್ ಖರೀದಿಸಿದ್ದ ಟ್ವೋರ್ಟಜೆಸ್ ಅವರು ಸಂಜೆ ತಮ್ಮ ಪತ್ನಿಯ ಜೊತೆ ಹೊಸ ಕಾರ್‌ನಲ್ಲಿ ಮೈಕೋನಸ್ ದ್ವೀಪದಲ್ಲಿ ಪ್ರಯಾಣಿಸುತ್ತಿದ್ದರು.

ವೇಗವಾಗಿ ಸಂಚರಿಸುತ್ತಿದ್ದ ಕಾರ್ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಮರಕ್ಕೆ ಡಿಕ್ಕಿಯಾಗಿದೆ. ಉದ್ಯಮಿ ಸ್ಥಳದಲ್ಲೇ ಮೃತಪಟ್ಟಿದ್ದು ಕೋಟ್ಯಾಂತರ ಬೆಲೆಯ ಕಾರ್ ಸಹ ಬೆಂಕಿಗೆ ಆಹುತಿಯಾಗಿದೆ. ಉದ್ಯಮಿಯ ಪತ್ನಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ .

ಅತಿಯಾದ ಚಳಿ…. ಯಾರಿಗೆಲ್ಲ ಅಪಾಯ? ಮುನ್ನೆಚ್ಚರಿಕೆ ಏನು? -ಇಲ್ಲಿದೆ ವೈದ್ಯರ ಸಲಹೆ

Related Articles

Back to top button