Belagavi NewsBelgaum NewsKarnataka NewsLatest

*ಬೆಳಗಾವಿ: ಪೊಲೀಸರ ಮುಂದೆಯೇ ವಿಷ ಕುಡಿದ ರೈತ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕಬ್ಬು ಕಟಾವು ವಿಚಾರವಾಗಿ ನಡೆದ ಗಲಾಟೆಯಲ್ಲಿ ರೈತನೊಬ್ಬ ಪೊಲೀಸರ ಎದುರಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕಂಕನವಾಡಿಯಲ್ಲಿ ನಡೆದಿದೆ.

ಬಾಳಯ್ಯ ವಿಷ ಸೇವಿಸಿರುವ ರೈತ. ಬಳಯ್ಯ ತನ್ನ ಜಮೀನಿನಲ್ಲಿ ಕಬ್ಬು ಕಟಾವು ಮಾಡುತ್ತಿದ್ದ. ಈ ವೇಳೆ ಪಕ್ಕದ ಜಮೀನಿನ ನೀಲಕಂಠ ಹಿರೇಮಠ ಎಂಬಾತ ಕ್ಯಾತೆ ತೆಗೆದಿದ್ದಾನೆ.

Home add -Advt

ಗಲಾಟೆ ಆರಂಭವಾಗಿ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಈ ವೇಳೆ ರೈತ ಬಾಳಯ್ಯ ತಾನು ತನ್ನ ಜಮೀನಿನ ಕಬ್ಬು ಕಟಾವು ಮಾಡುತ್ತಿದ್ದೇನೆ. ಆದಾಗ್ಯೂ ಅನಗತ್ಯ ತೊಂದರೆ ಕೊಡಲಾಗುತ್ತಿದೆ ಎಂದು ಹೇಳುತ್ತಾ ಪೊಲೀಸರ ಎದುರಲ್ಲೇ ವಿಷದ ಬಾಟಲಿ ತೆಗೆದು ಸೇವಿಸಿದ್ದಾನೆ.

ಅಸ್ವಸ್ಥ ರೈತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.


Related Articles

Back to top button