Latest

ನವೀನ್ ಮೃತದೇಹ ಮೆಡಿಕಲ್ ಕಾಲೇಜಿಗೆ ದಾನ ಮಾಡಿದ ಪೋಷಕರು

ಪ್ರಗತಿವಾಹಿನಿ ಸುದ್ದಿ; ದಾವಣಗೆರೆ: ಉಕ್ರೇನ್ ನಲ್ಲಿ ರಷ್ಯಾ ದಾಳಿಯಲ್ಲಿ ಮೃತಪಟ್ಟಿದ್ದ ರಾಜ್ಯದ ವೈದ್ಯಕೀಯ ವಿದ್ಯಾರ್ಥಿ ನವೀನ್ ಮೃತದೇಹವನ್ನು ಪೋಷಕರು ಮೆಡಿಕಲ್ ಕಾಲೇಜಿಗೆ ದಾನ ಮಾಡುವ ಮೂಲಕ ಸಾರ್ಥಕತೆ ಮೆರೆದಿದ್ದಾರೆ.

ನವೀನ್ ಮೃತದೇಹ ಇಂದು ಮುಂಜಾನೆ ಸ್ವಗ್ರಾಮ ಚಳಗೇರಿಗೆ ಬಂದು ತಲುಪಿತ್ತು. ಮೃತದೇಹದ ಅಂತಿಮ ದರ್ಶನ ಪಡೆದ ಕುಟುಂಬದವರು, ಸ್ನೇಹಿತರು, ಗ್ರಾಮಸ್ಥರು ಗ್ರಾಮದಲ್ಲಿ ಪಾರ್ಥಿವ ಶರೀರದ ಮೆರವಣಿಗೆ ಮಾಡಿದರು. ಬಳಿಕ ನವೀನ್ ಮೃತದೇಹವನ್ನು ದಾವಣಗೆರೆ ಎಸ್.ಎಸ್.ಎಂ ಮೆಡಿಕಲ್ ಕಾಲೇಜಿಗೆ ಹಸ್ತಾಂತರಿಸಲಾಗಿದೆ.

Home add -Advt

ನವೀನ್ ತಂದೆ ಶೇಖರ್ ಗೌಡ, ತಾಯಿ ವಿಜಯಲಕ್ಷ್ಮಿ ದಾವಣಗೆರೆ ಎಸ್​ಎಸ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಬಿ.ಎಸ್ ಪ್ರಸಾದ ನೇತೃತ್ವದ ವೈದ್ಯರ ತಂಡಕ್ಕೆ ಹಸ್ತಾಂತರಿಸಿದ್ದಾರೆ. ಮೆಡಿಕಲ್ ಕಾಲೇಜಿನ ಶಾಸ್ತ್ರ ವಿಭಾಗದಲ್ಲಿ ನವೀನ್ ಮೃತದೇಹದ ಅಂತಿಮ ದರ್ಶನಕ್ಕೆ 2 ಗಂಟೆಗಳ ಕಾಲ ವ್ಯವಸ್ಥೆ ಮಾಡಲಾಗಿದೆ.
ಶಾಲಾ ಬಾಲಕಿ ಮೇಲೆ ಹರಿದ ಕಸದ ಲಾರಿ; ಸ್ಥಳದಲ್ಲೇ ವಿದ್ಯಾರ್ಥಿನಿ ಸಾವು

 

Related Articles

Back to top button