Belagavi NewsBelgaum NewsKannada NewsKarnataka NewsNationalTravel

*ಪ್ರಯಾಣಿಕರ ಗಮನಕ್ಕೆ: ಕೆಲ ರೈಲುಗಳ ಸಂಚಾರ ರದ್ದು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಹುಬ್ಬಳ್ಳಿ ವಿಭಾಗದ ಕ್ಯಾಸಲ್ ರಾಕ್ ಮತ್ತು ಲೋಂಡಾ ನಡುವಿನ ಮಾರ್ಗದಲ್ಲಿ ನಡೆಯುತ್ತಿರುವ ದ್ವಿಪಥ ಕಾಮಗಾರಿಯ ಸಲುವಾಗಿ, ನೈಋತ್ಯ ರೈಲ್ವೆಯು ಈ ಕೆಳಗಿನ ರೈಲುಗಳ ಭಾಗಶಃ ರದ್ದತಿಯನ್ನು ವಿಸ್ತರಿಸಿದೆ.

ಈ ಹಿಂದೆ ಅಕ್ಟೋಬರ್ 31, 2025ರವರೆಗೆ ಭಾಗಶಃ ರದ್ದುಗೊಳಿಸಲಾಗಿದ್ದ ರೈಲು ಸಂಖ್ಯೆ 17333 ಮೀರಜ್ – ಕ್ಯಾಸಲ್ ರಾಕ್ ಡೈಲಿ  ಎಕ್ಸ್ ಪ್ರೆಸ್  ಮತ್ತು ರೈಲು ಸಂಖ್ಯೆ 17334 ಕ್ಯಾಸಲ್ ರಾಕ್ – ಮೀರಜ್ ಡೈಲಿ  ಎಕ್ಸ್ ಪ್ರೆಸ್  ರೈಲುಗಳ ಭಾಗಶಃ ರದ್ದತಿಯನ್ನು ಈಗ ನವೆಂಬರ್ 1 ರಿಂದ 30, 2025ರವರೆಗೆ ಮುಂದುವರಿಸಲಾಗಿದೆ.

ಈ ಅವಧಿಯಲ್ಲಿ, ರೈಲು ಸಂಖ್ಯೆ 17333 ಮೀರಜ್–ಕ್ಯಾಸಲ್ ರಾಕ್ ಡೈಲಿ  ಎಕ್ಸ್ ಪ್ರೆಸ್  ರೈಲು ಲೋಂಡಾ ಮತ್ತು ಕ್ಯಾಸಲ್ ರಾಕ್ ನಡುವೆ ಭಾಗಶಃ ರದ್ದುಗೊಳಿಸಲಾಗಿದ್ದು, ಇದು ಕ್ಯಾಸಲ್ ರಾಕ್ ಬದಲಾಗಿ ಲೋಂಡಾದಲ್ಲಿ ತನ್ನ ಸಂಚಾರವನ್ನು ಕೊನೆಗೊಳಿಸಲಿದೆ. ಅದೇ ರೀತಿ, ರೈಲು ಸಂಖ್ಯೆ 17334 ಕ್ಯಾಸಲ್ ರಾಕ್–ಮೀರಜ್ ಡೈಲಿ  ಎಕ್ಸ್ ಪ್ರೆಸ್  ರೈಲು ಸಹ ಕ್ಯಾಸಲ್ ರಾಕ್ ಮತ್ತು ಲೋಂಡಾ ನಡುವೆ ಭಾಗಶಃ ರದ್ದುಗೊಳಿಸಲಾಗಿದ್ದು, ಇದು ಕ್ಯಾಸಲ್ ರಾಕ್ ಬದಲಿಗೆ ಲೋಂಡಾದಿಂದ ತನ್ನ ಸಂಚಾರವನ್ನು ಪ್ರಾರಂಭಿಸಲಿದೆ.

Related Articles

Back to top button