Belagavi NewsBelgaum NewsKannada NewsKarnataka News
*ಬೆಳಗಾವಿಯಲ್ಲಿ ಈ ಎರಡು ದಿನ ಮಾಂಸ ಮಾರಾಟ ಮಾಡುವಂತಿಲ್ಲ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಏಪ್ರೀಲ್-2025 ರ ಮಾಹೆಯಲ್ಲಿ ಬರುವಂತಹ ಮಹಾವೀರ ಜಯಂತಿ ಹಾಗೂ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಜಯಂತಿ ಪ್ರಯುಕ್ತ ಬೆಳಗಾವಿ ಮಹಾನಗರ ವ್ಯಾಪ್ತಿಯಲ್ಲಿ ಕಸಾಯಿಖಾನೆ, ಮಾಂಸಾಹಾರಿ ಅಂಗಡಿಗಳನ್ನು ಬಂದ್ ಮಾಡಲು ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತರು ಸೂಚಿಸಿರುತ್ತಾರೆ.
ಏಪ್ರೀಲ್ 10, ಗುರುವಾರ ಮಹಾವೀರ ಜಯಂತಿ ಹಾಗೂ ಏಪ್ರೀಲ್ 14, ಸೋಮವಾರ ರಂದು ಡಾ. ಬಾಬಾಸಾಹೇಬ್ ಅಂಬೇಡ್ಕರ ಜಯಂತಿ ನಿಮಿತ್ತ ಬೆಳಗಾವಿ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಎಲ್ಲ ಕಸಾಯಿಖಾನೆ/ ಮಾಂಸಾಹಾರಿ ಅಂಗಡಿಗಳನ್ನು ಬಂದು ಮಾಡಿ ಸಹಕರಿಸುವಂತೆ ಕೋರಲಾಗಿದೆ.
ಸದರಿ ದಿನದಂದು ಕಸಾಯಿಖಾನೆ/ಮಾಂಸಾಹಾರಿ ಅಂಗಡಿ ಮಾಲೀಕರು ಆದೇಶವನ್ನು ಉಲ್ಲಂಘನೆ ಮಾಡಿರುವದು ಕಂಡು ಬಂದರೆ ಅಂತಹ ಮಾಲೀಕರುಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಮಹಾನಗರ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.