Latest

ಬೆಳಗಾವಿಯಲ್ಲಿ ಮತ್ತೊಂದು ನೈತಿಕ ಪೊಲೀಸ್ ಗಿರಿ; ಮೂವರ ಬಂಧನ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ಮತ್ತೊಂದು ನೈತಿಕ ಪೊಲೀಸ್ ಗಿರಿ ಪ್ರಕರಣ ನಡೆದಿದ್ದು, ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ರಾಯಬಾಗ ಮೂಲದ ಯುವಕ ಸಂಕೇಶ್ವರ ಮೂಲದ ಯುವತಿ ಬೆಳಗಾವಿಗೆ ಆಗಮಿಸಿದ್ದರು. ಅನ್ಯಕೋಮಿನ ಯುವತಿ ಜೊತೆ ಯುವಕ ಸುತಾಡುತ್ತಿದ್ದ ಎಂದು ಆರೋಪಿಸಿ ಯುವಕ ಹಾಗೂ ಯುವತಿಯನ್ನು ನಿರ್ಜನ ಪ್ರದೇಶಕ್ಕೆ ಕೊಂಡೊಯ್ದ ಆಟೋ ಚಾಲಕ ಸೇರಿದಂತೆ ಮೂವರು ಮನಬಂಧಂತೆ ಹಲ್ಲೆ ನಡೆಸಿದ್ದರು. ಅಲ್ಲದೇ ಯುವಕ ಯುವತಿ ಬಳಿ ಇದ್ದ ಮೊಬೈಲ್, ಹಣ, ಆಧಾರ್ ಕಾರ್ಡ್, ಎಟಿಎಂ ಗಳನ್ನು ಕಸಿದು ಪರಾರಿಯಾಗಿದ್ದರು.

Home add -Advt

ಬೆಳಗಾವಿ ಮಾಳಮಾರುತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನೈತಿಕ ಪೊಲೀಸ್ ಗಿರಿ ಪ್ರಕರಣ ದಾಖಲಿಸಿಕೊಮ್ದ ಪೊಲೀಸರು ಇದೀಗ ಆರೋಪಿಗಳಾದ ಆಟೋ ಚಾಲಕ ದಾವತ್ ಕತೀಬ್, ಅಯೂಬ್ ಮತ್ತು ಯುಸೂಫ್ ಪಠಾಣ್ ಎಂಬುವವರನ್ನು ಬಂಧಿಸಿದ್ದಾರೆ.
ಲೈಂಗಿಕ ದೌರ್ಜನ್ಯ ಆರೋಪ: ರಾಜೇಶ್ ಭಟ್ ವಿರುದ್ಧ FIR

Related Articles

Back to top button