Latest

*ಆತ್ಮಹತ್ಯೆಗೆ ಶರಣಾದ ದಂತವೈದ್ಯೆ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವೈದ್ಯನ ಕಿರುಕುಳಕ್ಕೆ ಬೇಸತ್ತ ದಂತವೈದ್ಯೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳುರಿನ ಸಂಜಯನಗರದಲ್ಲಿ ನಡೆದಿದೆ.

ಪ್ರಿಯಾಂನ್ಷು ತ್ರಿಪಾಠಿ ಆತ್ಮಹತ್ಯೆಗೆ ಶರಣಾದ ದಂತವೈದ್ಯೆ. ಉತ್ತರ ಪ್ರದೇಶ ಮೂಲದ ಪ್ರಿಯಾಂನ್ಷು ಬೆಂಗಳೂರಿನ ಎಂ ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ದಂತ ವೈದ್ಯೆಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಅದೇ ಆಸ್ಪತ್ರೆಯ ವೈದ್ಯ ಸುಮಿತ್, ಪ್ರಿಯಾಂನ್ಷು ಹಿಂದೆ ಬಿದ್ದಿದ್ದ. ತನ್ನನ್ನು ಮದುವೆಯಾಗುವಂತೆ ಪೀಡಿಸುತ್ತಿದ್ದ. ಡ್ರಿಂಕ್ಸ್, ಸಿಗರೇಟ್ ಸೇದುವಂತೆಯೂ ಒತ್ತಾಯಿಸುತ್ತಿದ್ದ ಎನ್ನಲಾಗಿದೆ.

Home add -Advt

ಸುಮಿತ್ ಒತ್ತಡಕ್ಕೆ ಮಣಿಯದಿದ್ದಾಗ ಪ್ರಿಯಾಂನ್ಷು ನಡತೆಯ ಬಗ್ಗೆ ಆಸ್ಪತ್ರೆಯಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ್ದನಂತೆ. ಇದರಿಂದ ನೊಂದ ಪ್ರಿಯಾನ್ಷು ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಜನವರಿ 25ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸಂಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

*ಡಂಬಲ್ಸ್ ನಿಂದ ಮನಬಂದಂತೆ ಹೊಡೆದು ಪತ್ನಿಯನ್ನು ಕೊಂದ ಪತಿ*

https://pragati.taskdun.com/husbandmurderwifebangalore-2/

Related Articles

Back to top button