Kannada NewsKarnataka News
ಭೀಕರ ಅಪಘಾತ: ರತ್ನಾಗಿರಿ ಬಳಿ ಹೊತ್ತಿ ಉರಿದ 13 ಜನರಿದ್ದ ಬೆಳಗಾವಿ ಬಸ್

ಪ್ರಗತಿವಾಹಿನಿ ಸುದ್ದಿ, ಕೊಲ್ಲಾಪುರ – ಬೆಳಗಾವಿಯಿಂದ ರತ್ನಾಗಿರಿಗೆ ತೆರಳುತ್ತಿದ್ದ ಬಸ್ ಭೀಕರ ಅಪಘಾತಕ್ಕೀಡಾಗಿದ್ದು, ಹೊತ್ತಿ ಉರಿದಿದೆ.
ಕೆಎ 22 ಎಫ್ 2065 ನಂಬರಿನ ಬಸ್ ಕೊಲ್ಲಾಪುರ – ರತ್ನಾಗಿರಿ ಮಧ್ಯೆ ಜಾಧವವಾಡಿ ಎಬಲ್ಲಿ ಕಂದಕಕ್ಕೆ ಉರುಳಿ ಬಿದ್ದು ನಂತರ ಹೊತ್ತಿ ಉರಿದಿದೆ. ಬಸ್ ನಲ್ಲಿ 13 ಜನರು ಪ್ರಯಾಣಿಸುತ್ತಿದ್ದರು. ಪ್ರಯಾಣಿಕರಿಗೆ ಯಾವುದೇ ಪ್ರಾಣ ಹಾನಿ ಅಥವಾ ಗಾಯಗಳಾಗಿಲ್ಲ ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ.
ಪಾದಚಾರಿಯೊಬ್ಬನನ್ನು ತಪ್ಪಿಸಲು ಹೋಗಿ ಬಸ್ ಉರುಳಿ ಬಿದ್ದಿದೆ. ಹಿಂಬದಿಯ ಗ್ಲಾಸ್ ಒಡೆದು ಪ್ರಯಾಣಿಕರನ್ನು ಹೊರಗೆ ತರಲಾಯಿತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಪ್ರಗತಿವಾಹಿನಿಗೆ ತಿಳಿಸಿದ್ದಾರೆ.
https://pragati.taskdun.com/court-orderseize-vehiclechikkodi-asistent-commissioner-office/




