
ಪ್ರಗತಿವಾಹಿನಿ ಸುದ್ದಿ: ಮಳೆಯ ನಡುವೆ ತುಂಬಿ ಹರಿಯುತ್ತಿದ್ದ ಹಳ್ಳ ದಾಟಲು ಹೋದ ವ್ಯಕ್ತಿಯೊಬ್ಬರು ಬೈಕ್ ಸಮೇತ ನೀರಿನ ರಭಸಕ್ಕೆ ಕೊಚ್ಚಿ ಹೋಗಿರುವ ಘಟನೆ ನಡೆದಿದೆ.
ಬೆಳಗಾವಿಯ ತಾರಿಹಾಳ ಬಳಿ ಈ ಘಟನೆ ನಡೆದಿದೆ. ಸುರೇಶ್ ನಿಜಗುಣಿ ಗುಂಡನ್ನವರ್ ನೀರಿನಲ್ಲಿ ಕೊಚ್ಚಿ ಹೋಗಿರುವ ವ್ಯಕ್ತಿ. ಪಂಚಾಯತ್ ಸಿಬ್ಬಂದಿ ಎಂದು ತಿಳಿದುಬಂದಿದೆ.
ಪಂಚಾಯತ್ ಕೆಲಸ ಮುಗಿಸಿ ಮನೆಗೆ ವಾಪಸ್ ಆಗುತ್ತಿದ್ದ ವೇಳೆ ಹಳ್ಳ ದಾಟಲು ಹೋಗಿ ಬೈಕ್ ಸಮೇತ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ನೀರುಪಾಲಾಗಿರುವ ಸುರೇಶ್ ಗಾಗಿ ಅಗ್ನಿಶಾಮಕ ಸಿಬಂದಿ, ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ.