CrimeKannada NewsKarnataka NewsLatest

*ಅಟ್ರಾಸಿಟಿ‌ ಕೇಸ್‌ನಲ್ಲಿ ಜಾಮೀನು ಕೊಡಿಸಲು ಲಂಚ ಸ್ವೀಕಾರ: ಇಬ್ಬರು ಪೊಲೀಸರು ಲಾಕ್*

ಪ್ರಗತಿವಾಹಿನಿ ಸುದ್ದಿ: ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದ ಇಬ್ಬರು ಪೊಲೀಸ್ ಕಾನ್ಸ್‌ಸ್ಟೇಬಲ್‌ಗಳು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿರುವ ಘಟನೆ ಕೊಪ್ಪಳದಲ್ಲಿ ಘಟನೆ ನಡೆದಿದೆ.

ಜಾಮೀನು ಕೊಡಿಸೋದಾಗಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಪೊಲೀಸ್ ಕಾನ್ಸ್ ಸ್ಟೇಬಲ್ ಸಿಕ್ಕಿಬಿದ್ದಿದ್ದಾರೆ. ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಪೊಲೀಸ್ ಠಾಣೆಯ ಪೇದೆಗಳಾದ ಮಾರುತಿ ಬ್ಯಾಳಿ ಹಾಗೂ ಚಂದಾಲಿಂಗ್ ಮೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.

ಕೊಪ್ಪಳದ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಪೊಲೀಸ್ ಠಾಣೆಯ ಪೇದೆಗಳಾದ ಮಾರುತಿ ಬ್ಯಾಳಿ ಹಾಗೂ ಚಂದಾಲಿಂಗ್ ಮೇಳೆ, ಅಟ್ರಾಸಿಟಿ ಪ್ರಕರಣವೊಂದರಲ್ಲಿ ಜಾಮೀನು ಕೊಡೋದಾಗಿ ಹೇಳಿ ಹಣಕ್ಕೆ ಬೇಡಿಕೆ ಇಟ್ಟಿದ್ದರು.

ಮೆಹಬೂಬ್ ಪಾಶಾ ಎಂಬಾತನ ಬಳಿ ಫೋನ್ ಪೇ ಮೂಲಕ ಹದಿನೈದು ಸಾವಿರ ಹಣವನ್ನು ಪಡೆದುಕೊಂಡಿದ್ದರು. ಆದ್ರೆ, ಮೂರು ಸಾವಿರ ಹಣವನ್ನು ಸ್ವೀಕರಿಸುವಾಗ ಪೊಲೀಸ್ ಕಾನ್ಸ್‌ಟೇಬಲ್‌ಗಳಾದ ಮಾರುತಿ ಬ್ಯಾಳಿ ಮತ್ತು ಚಂದಾಲಿಂಗ್ ಲಾಕ್ ಆಗಿದ್ದಾರೆ.

ಇಬ್ಬರು ಕಾನ್ಸ್ ಟೇಬಲ್ ಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಸೇವೆಯಿಂದ ಸಸ್ಪೆಂಡ್ ಮಾಡಲು ಶಿಫಾರಸು ಮಾಡಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button