Latest

ಕ್ಲಬ್ ಉಪಾಧ್ಯಕ್ಷನಿಂದ ಮಹಿಳಾ ಪ್ರಾಂಶುಪಾಲರಿಗೆ ಲೈಂಗಿಕ ಕಿರುಕುಳ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕ್ಲಬ್ ಉಪಾಧ್ಯಕ್ಷನೊಬ್ಬ ಮಹಿಳಾ ಪ್ರಾಂಶುಪಾಲರೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ಬೆಳಕಿಗೆ ಬಂದಿದೆ.

ಬೆಂಗಳೂರಿನ ಯುನಿಯನ್ ಕ್ಲಬ್ ಉಪಾಧ್ಯಕ್ಷ ಮೋಹನ್ ರಾವ್ ವಿರುದ್ಧ ಆರೋಪ ಕೇಳಿಬಂದಿದ್ದು, ಮಹಿಳಾ ಪ್ರಾಂಶುಪಾಲರು ದೂರು ನೀಡಿದ್ದಾರೆ.

ಮಹಿಳಾ ಪ್ರಾಂಶುಪಾಲರು ಯುನಿಯನ್ ಕ್ಲಬ್ ಗೆ ಹೋಗಿದ್ದಾಗ ಶೌಚಾಲಯಕ್ಕೆಂದು ತೆರಳುತ್ತಿದ್ದ ವೇಳೆ ಕ್ಲಬ್ ಉಪಾಧ್ಯಕ್ಷ ಮೋಹನ್ ರಾವ್ ಅಡ್ಡಿಪಡಿಸಿದ್ದಾರೆ. ಅಲ್ಲದೇ ಈ ವೇಳೆ ಅಸಭ್ಯವಾಗಿ ವರ್ತಿಸಿ ಕಿರುಕುಳ ನೀಡಿದ್ದಾರೆ ಎಂದು ಮಹಿಳಾ ಪಾಂಶುಪಾಲರು ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

Related Articles

Back to top button