Kannada NewsKarnataka NewsLatest

ಕೊರೋನಾಕ್ಕೆ ಖಾನಾಪುರದಲ್ಲಿ ಮೊದಲ ಬಲಿ

ಪ್ರಗತಿವಾಹಿನಿ ಸುದ್ದಿ, ಕಕ್ಕೇರಿ:  -ಖಾನಾಪುರದಲ್ಲಿ  ಬೆಳಗಾವಿ – ಖಾನಾಪುರ ರಸ್ತೆಯ ಪಕ್ಕದಲ್ಲಿ ಹೊಟೆಲ್ ನಡೆಸುತ್ತಿದ್ದ ವ್ಯಕ್ತಿ ಕೊರೋನಾಕ್ಕೆ ಬಲಿಯಾಗಿದ್ದಾನೆ.

ಸರ್ಕಾರಿ ಆಸ್ಪತ್ರೆಯ ಮುಂದುಗಡೆ ಇರುವ ಹೊಟೆಲ್  ವ್ಯಕ್ತಿಗೆ  ನಾಲ್ಕು ದಿನಗಳ ಹಿಂದೆ  ಆರೋಗ್ಯದಲ್ಲಿ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆತನನ್ನು ಬೆಳಗಾವಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು.

Home add -Advt

ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದ. ಕೊರೋನಾ ಸೋಂಕು ತಗುಲಿರುವ ಸಂಶಯದ ಹಿನ್ನೆಲೆಯಲ್ಲಿ ಮೃತದೇಹವನ್ನು ಕುಟುಂಬಸ್ಥರಿಗೆ ಕೂಡಾ ನೀಡಿರಲಿಲ್ಲ. ಅಲ್ಲಿಯೇ ಸರ್ಕಾರದ ಆದೇಶದಂತೆ ಅಂತ್ಯಕ್ರಿಯೆ ಕೂಡಾ ನೆರವೇರಿಸಲಾಗಿತ್ತು.

ಗುರುವಾರ ಅವರ ಕೊರೋನಾ ರಿಪೋರ್ಟ್ ನಲ್ಲಿ ಅವರಿಗೆ ಕೊರೋನಾ ವೈರಸ್ ಸಕಾರಾತ್ಮಕವಾಗಿ ದೃಢಗೊಂಡಿರುವ ಕಾರಣ ಅವರು ವ್ಯವಹರಿಸುತ್ತಿದ್ದ ಹೊಟೇಲ್ ನ್ನು ಸೀಲ್ ಡೌನ್ ಮಾಡಲಾಗಿದೆ.

ಕೊರೋನಾ ವೈರಸ್ ಗೆ ಖಾನಾಪುರ ತಾಲೂಕಿನಲ್ಲಿ  ಮೊದಲ  ಬಲಿ ಇದಾಗಿದ್ದು, ತಾಲೂಕಿನಲ್ಲಿ ಆತಂಕ ನಿರ್ಮಾಣಗೊಂಡಿದೆ.

Related Articles

Back to top button