Kannada NewsLatest

ನಾಳೆ ಬೆಳಗಾವಿಯಲ್ಲಿ ನಡೆಯಲಿದೆ RSS ಗಣೇಶ ವಂದನ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ರಾಷ್ಟ್ರೀಯ ಸ್ವಯಂಸೇವಕ ಸಂಘ, ಬೆಳಗಾವಿ ನಗರದ ವತಿಯಿಂದ ಈ ವರ್ಷವೂ ‘ಗಣೇಶ ವಂದನ’ ಕಾರ್ಯಕ್ರಮ ಆಯೋಜಿಸಲಾಗಿದೆ. ಬುಧವಾರ 7 ರಂದು ಸಂಜೆ 6 ಗಂಟೆಯಿಂದ ನಗರ ಹಾಗೂ ಹೊರವಲಯದಲ್ಲಿ ಆಯ್ದ ಸಾರ್ವಜನಿಕ ಶ್ರೀ ಗಣೇಶ ಮೂರ್ತಿ ಎದುರು ಸಂಘದ ಘೋಷ್ ತಂಡದಿಂದ ಈ ವರ್ಷ ಎರಡು ಗುಂಪುಗಳಲ್ಲಿ ಘೋಷಣೆ ಮೊಳಗಲಿದೆ.

ಮೊದಲ ಗುಂಪಿನ ಮಾರ್ಗ

Home add -Advt

ಶಹಾಪುರದ ಬ್ಯಾಂಕ್ ಆಫ್ ಇಂಡಿಯಾ ಕಾರ್ನರ್ ನಿಂದ ಆರಂಭ. ಅಲ್ಲಿಂದ ಜೈ ಶಂಕರ ಭವನ ಖಾಸಬಾಗ್, ತೇಗಿನ್ ಗಲ್ಲಿ ವಡ್ಗಾಂವ್, ಆದರ್ಶ ನಗರ ವಡ್ಗಾಂವ್, ಧರಂವೀರ್ ಸಂಭಾಜಿ ಚೌಕ್ ಅಂಗೋಲ್, ಟಿಳಕವಾಡಿ ಮೊದಲ ರೈಲ್ವೆ ಗೇಟ್, ಮಿಲೇನಿಯಮ್  ಗಾರ್ಡನ್, ಸುಭಾಷ್ ಮಾರ್ಕೆಟ್ ಹಿಂದವಾಡಿ.

ಎರಡನೇ ಗುಂಪಿನ ಮಾರ್ಗ:
ಸಾಯಿ ಮಂದಿರ ಮಾಳಮಾರುತಿಯಿಂದ ಆರಂಭವಾಗಿ ಅಲ್ಲಿಂದ ವೈಭವ್ ನಗರ, ಹನುಮಂತನಗರ, ನೆಹರು ನಗರ, ಶಿವಾಜಿ ನಗರ ಶಿವಾಜಿ ಚೌಕ್, ಚವಾಟ್ ಗಲ್ಲಿ ಮತ್ತು ಕ್ಯಾಂಪ್ ಪೊಲೀಸ್ ಠಾಣೆ ಎದುರು ಸಾರ್ವಜನಿಕ ಶ್ರೀ ಗಣೇಶ ಮೂರ್ತಿ ಎದುರು ಗಣೇಶ ವಂದನ ಕಾರ್ಯಕ್ರಮ ನಡೆಯಲಿದೆ.

ಸಂಯುಕ್ತ ಮಹಾರಾಷ್ಟ್ರ ಚೌಕ್, ನರಗುಂದಕರ್ ಭಾವೆ ಚೌಕ್, ತಿಲಕ್ ಚೌಕ್ ಮತ್ತು ಎಸ್‌ಪಿಎಂ ರಸ್ತೆ (ಪ್ರಕಾಶ್ ಚಿತ್ರಮಂದಿರದ ಮುಂಭಾಗ) ಎರಡೂ ಗುಂಪುಗಳು ಒಟ್ಟಾಗಿ ಸೇರಿ ಗಣೇಶ ವಂದನೆ ಸಲ್ಲಿಸುತ್ತವೆ.
ಬೈಕ್ ಕಳ್ಳನ ಬಂಧನ; 10 ಬೈಕ್ ವಶ

https://pragati.taskdun.com/latest/motorcycle-thief-arrested/

Related Articles

Back to top button