Latest

*ಏ.25 ರಂದು “ಅನುಭವ ಮಂಟಪ ಬಸವಾದಿ ಶರಣರ ವೈಭವ” ರಥ ಜಿಲ್ಲೆಗೆ ಆಗಮನ*

ಪ್ರಗತಿವಾಹಿನಿ ಸುದ್ದಿ: ಕರ್ನಾಟಕ ಸಾಂಸ್ಕೃತಿಕ ನಾಯಕರಾದ ಬಸವಣ್ಣನವರ ಬದುಕು, ಸಂದೇಶ ಮತ್ತು ಚಿಂತನೆಗಳನ್ನು ನಾಡಿನಾದ್ಯಂತ ವ್ಯಾಪಕವಾಗಿ ಪ್ರಚುರಪಡಿಸುವ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಿಲ್ಲಾಡಳಿತ, ಬಾಗಲಕೋಟೆ ಜಿಲ್ಲೆ ಹಾಗೂ ಕೂಡಲ ಸಂಗಮ ಅಭಿವೃದ್ಧಿ ಪ್ರಾಧಿಕಾರ ಬಾಗಲಕೋಟೆ ಇವರ ಸಹಯೋಗದಲ್ಲಿ ಏ.29 ಹಾಗೂ ಏ.30 ರಂದು ಬಾಗಲಕೋಟೆ ಜಿಲ್ಲೆ ಕೂಡಲ ಸಂಗಮದಲ್ಲಿ ಎರಡು ದಿನಗಳ ಕಾಲ “ಅನುಭವ ಮಂಟಪ-ಬಸವಾದಿ ಶರಣರ ವೈಭವ” ಕಾರ್ಯಕ್ರಮವನ್ನು ಬಸವ ಜಯಂತಿ ಅಂಗವಾಗಿ ಆಯೋಜಿಸಲಾಗಿದೆ.

Home add -Advt

ಸದರಿ ಕಾರ್ಯಕ್ರಮದ ಅಂಗವಾಗಿ “ಅನುಭವ ಮಂಟಪ-ಬಸವಾದಿ ಶರಣರ ವೈಭವ” ರಥ ಯಾತ್ರೆಯು ವಿಜಯಪುರ ಜಿಲ್ಲೆಯಿಂದ ಏ.25 ರಂದು ಸಂಜೆ 4 ಗಂಟೆಗೆ ನಗರದ ಕಿತ್ತೂರು ರಾಣಿ ಚನ್ನಮ್ಮ ವೃತ್ತ ತಲುಪಲಿದೆ. ಈ ರಥ ಯಾತ್ರೆಯನ್ನು ಸ್ವಾಗತಿಸಿ ಧಾರವಾಡ ಜಿಲ್ಲೆಗೆ ಬಿಳ್ಕೊಡಲಾಗುವುದು ಆದಕಾರಣ ಜಿಲ್ಲೆಯ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸಾಹಿತಿ/ಕಲಾವಿದರು ಹಾಗೂ ಬಸವ ತತ್ವ ಅನುಯಾಯಿಗಳು, ಜಿಲ್ಲೆಯ ಎಲ್ಲ ಅಧಿಕಾರಿ/ನೌಕರರು ಮತ್ತು ಸಾರ್ವಜನಿಕರು ಭಾಗವಹಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Related Articles

Back to top button