Belagavi NewsBelgaum NewsKannada NewsKarnataka NewsLatest

*ಅತ್ಯಾಚಾರದ ಸುಳ್ಳು ಕೇಸ್ ಹಾಕಿ ಹಣ ದೋಚುತ್ತಿದ್ದ ಖತರ್ನಾಕ್ ಲೇಡಿ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಪೊಲೀಸರು ಹಾಗೂ ದೊಡ್ಡ ದೊಡ್ಡ ವ್ಯಕ್ತಿಗಳು ನನ್ನ ನಂಬಿಸಿ ಅತ್ಯಾಚಾರ ಮಾಡಿದ್ದಾರೆ ಎಂದು ಬೇದರಿಕೆ ಹಾಕಿ ಹಣ ವಸೂಲಿ ಮಾಡುವ ಸಂಚು ರೂಪಿಸುತ್ತಿದ್ದ ಮಹಿಳೆಯನ್ನು ಬೆಳಗಾವಿ ಪೊಲೀಸರು ಬಂಧಿಸಿ,‌ ರೌಡಿ ಶೀಟರ್ ಓಪನ್ ಮಾಡಿದ್ದಾರೆ. 

ಈ ಪ್ರಕರಣದ ಕುರಿತು ಬೆಳಗಾವಿ ಎಸ್ ಪಿ ಮಾತನಾಡಿದ್ದು, ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ರೇಷ್ಮಾ ಶಂಕರ ಮುತಗಾ ಎಂಬ ಮಹಿಳೆ 8 ತಿಂಗಳ ಹಿಂದೆ ಮದುವೆಯಾಗಿ ಮೋಸ ಮಾಡಿ ಓಡಿ ಹೋಗಿದ್ದಾರೆ ಎಂದು ದೂರು ದಾಖಲಿಸಿದ್ದರು. ತುಮಕೂರಿನಲ್ಲಿ ಖಾಸಗಿ ಶಾಲೆಯಲ್ಲಿ ಕೆಲಸ ಮಾಡುವ ಕಲ್ಯಾಣ ಎಂಬ ವ್ಯಕ್ತಿ ಮ್ಯಾಟ್ರಿಮೊನಿಯಲ್ಲಿ ಪರಿಚಯವಾಗಿ ಮದುವೆಯಾಗಿ ಮೋಸ ಮಾಡಿದ್ದಾರೆ ಎಂದು ದೂರು ನೀಡಿದ ಮೇಲೆ ಪ್ರಕರಣ ದಾಖಲಿಸಲು ಹಿಂದೇಟು ಹಾಕಿ ಪೊಲೀಸ್ ಇನ್ಸ್ಪೆಕ್ಟರ್ ಗೆ ವಾಟ್ಸಪ್ ಕಾಲ್ ಮಾಡುವ ರೀತಿ ಎರಡು ವಾಟ್ಸಪ್ ಮೂಲಕ ನಾನು ಒಂದು ಲಕ್ಷ ಕೊಟ್ಟಿದ್ದೇನೆ ಯಾಕೆ ನನ್ನ ಕೆಲಸ ಮಾಡುತ್ತಿಲ್ಲ? ಎಂದು ಮೆಸೇಜ್ ಮಾಡುತ್ತಾರೆ ಎಂದರು.

ಬಳಿಕ ನನ್ನ ಬಳಿ ಬಂದು ದೂರು ನೀಡಿದಾಗ ಪೊಲೀಸ್ ಇನ್ಸ್ಪೆಕ್ಟರ್ ಕರೆಸಿ ವಿಚಾರಿಸಿದಾಗ ಸರ್ ನನ್ನ ಮೊಬೈಲ್ ಫಾರಿನ್ ಸಿಕ್ ರಿಪೋರ್ಟ್ ಕಳಸಿ ಈ ಮಹಿಳೆ ಸುಳ್ಳು ಹೇಳುತ್ತಿದ್ದಾಳೆ. ಈಕೆ ನಗರ ಪೊಲೀಸ್ ಠಾಣೆಯ ವಿವಿಧ ಕಡೆ ಇದೇ ರೀತಿ ಮಾಡಿದ್ದಾಳೆ ಎಂದಾಗ ಬೈಲಹೊಂಗಲ ಡಿವೈಎಸ್ಪಿ ವೀರಯ್ಯ ಹಿರೇಮಠ ನೇತೃತ್ವದಲ್ಲಿ ತನಿಖೆ ಮಾಡಿಸಿದಾಗ ಐದು ವಿಚಾರದಲ್ಲಿ ಬೇರೆ ಬೇರೆ ಕಡೆ ವಂಚನೆಯೆಸಗಿದ್ದಾಳೆ ಎಂದರು.

2012ರಲ್ಲಿ ಕುಡಚಿ ಪೊಲೀಸ್ ಠಾಣೆಯಲ್ಲಿ ಪಕ್ಕದ ಮನೆಯವರು ಪರಿಚಯವಾಗಿ ಮದವೆಯಾಗುವುದಾಗಿ ಮೋಸಮಾಡಿದ್ದಾಗಿ ದೂರು, 2022ರಲ್ಲಿ ಘಟಪ್ರಭಾದಲ್ಲಿ ನಾಗರಾಜ ಗದಗ ಪೊಲೀಸ್ ಪೇದೆಯ ಮೇಲೆ ಅವರು ನನ್ನ ಗಂಡ ನನ್ನ ಬಿಟ್ಟು ಹೋಗಿದ್ದಾರೆ, 2023ರಲ್ಲಿ ಗಜೇಂದ್ರಗಡದ ಆಕಾಶ ಎಂಬುವ ಅತ್ಯಾಚಾರ ಮಾಡಿದ್ದಾನೆ ಎಂದು ದೂರು, ಇತ್ತೀಚೆಗೆ 2025ರ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಸುರೇಶ್ ಎಂಬುವರು ಮೋಸ ಮಾಡಿದ್ದಾರೆ ಎಂದು ಧಾರವಾಡ‌ ಸಬ್ ಅರಬನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಇಲ್ಲಿನ ಇನ್ಸ್ಪೆಕ್ಟರ್ ಮೇಲೂ ಕೇಸ್ ಕೊಟ್ಟಿದ್ದಾಳೆ ಎಂದು ಎಸ್ ಪಿ ಕೆ ರಾಮರಾಜನ್ ಅವರು ತಿಳಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button