Latest

ಒಂದೇ ಕುಟುಂಬದ ಮೂವರು ಸಮುದ್ರಪಾಲು; ಇಬ್ಬರ ಸಾವು; ಬಾಲಕಿ ನಾಪತ್ತೆ

ಪ್ರಗತಿವಾಹಿನಿ ಸುದ್ದಿ, ಮುಘಸೈಲ್: ಓಮನ್ ನ ಮುಘಸೈಲ್  ಕಡಲ ತೀರದಲ್ಲಿ ವಿಹರಿಸಲು ಹೋಗಿದ್ದ ಮಹಾರಾಷ್ಟ್ರ ಮೂಲದ  ಭಾರತೀಯ ಕುಟುಂಬದ 3 ಜನ ನೀರಿನ ಸೆಳೆತಕ್ಕೆ ಕೊಚ್ಚಿಹೋಗಿದ್ದು ಈ ಪೈಕಿ ಇಬ್ಬರು ಮೃತಪಟ್ಟಿದ್ದು  ಬಾಲಕಿ ನಾಪತ್ತೆಯಾಗಿದ್ದಾಳೆ.

ಶಶಿಕಾಂತ ಮಹಾಮನೆ (42) ಅವರ ಆತನ  ಶ್ರೇಯಸ್ (6) ಶವವನ್ನು ಹೊರತೆಗೆಯಲಾಗಿದ್ದು   ಮಗಳು ಶೃತಿ (9) ನಾಪತ್ತೆಯಾಗಿದ್ದಾಳೆ.  ಇವರು ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ವೇಳೆ ಇತರ ಕೆಲ ಪ್ರವಾಸಿಗರು ಅದನ್ನು ಚಿತ್ರೀಕರಿಸಿದ್ದಾರೆ. 

Home add -Advt

ಶಶಿಕಾಂತ ಮಹಾಮನೆ, ಅವರ ಪತ್ನಿ ಹಾಗೂ ಇಬ್ಬರು ಮಕ್ಕಳು ದುಬೈನಲ್ಲಿ ವಾಸಿಸುತ್ತಿದ್ದರು. ಅಲ್ಲಿನ ಕಂಪನಿಯೊಂದರಲ್ಲಿ ಶಶಿಕಾಂತ ಮಾರುಕಟ್ಟೆ ವ್ಯವಸ್ಥಾಪಕರಾಗಿ ಕೆಲಸ ಮಾಡಿಕೊಂಡಿದ್ದರು. ರಜೆ ನಿಮಿತ್ತ ನೆರೆಯ ಓಮನ್ ಗೆ ಟ್ರಿಪ್ ಗಾಗಿ ಹೋದಾಗ ಈ ದುರ್ಘಟನೆ ಸಂಭವಿಸಿದ್ದಾಗಿ ಅವರ ಸಹೋದರ ಹೇಳಿಕೊಂಡಿದ್ದಾರೆ.

ಗಾಂಧೀಜಿ ಪುತ್ಥಳಿ ಧ್ವಂಸ; ವೇದನೆ ವ್ಯಕ್ತಪಡಿಸಿದ ಭಾರತ

Related Articles

Back to top button