Latest

ಹಾಡ ಹಗಲೇ ಯುವತಿ ಕಿಡ್ನ್ಯಾಪ್ ಪ್ರಕರಣ ಸುಖಾಂತ್ಯ

ಪ್ರಗತಿವಾಹಿನಿ ಸುದ್ದಿ; ಕೋಲಾರ: ಹಾಡ ಹಗಲೇ ಯುವತಿಯ ಕಿಡ್ನ್ಯಾಪ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಕೋಲಾರದಲ್ಲಿ ಕಿಡ್ಯಾಪ್ ಆಗಿದ್ದ ಯುವತಿ ತುಮಕೂರಿನಲ್ಲಿ ಪತ್ತೆಯಾಗಿದ್ದಾಳೆ.

ಕೋಲಾರದ ನಿವಾಸಿ ಶಿವ ಎಂಬಾತ ಪ್ರೀತಿಸಿದ ಹುಡುಗಿಯನ್ನು ಹಾಡ ಹಗಲೇ ರಸ್ತೆಯಲ್ಲಿ ನಡೆದು ಹೋಗುತ್ತಿದ್ದಾಗ ಕಿಡ್ನಾಪ್ ಮಾಡಿದ್ದ. ಯುವತಿ ತನ್ನನ್ನು ಮದುವೆಯಾಗಲು ಒಪ್ಪದ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಇನ್ನೋವಾ ಕಾರಿನಲ್ಲಿ ಬಂದು ಕಿಡ್ನಾಪ್ ಮಾಡಿ ಪರಾರಿಯಾಗಿದ್ದ.

Home add -Advt

ಶಿವ ಕೋಲಾರದಿಂದ ಯುವತಿ ಕಿಡ್ನಾಪ್ ಮಾಡಿ ತುಮಕೂರಿಗೆ ಕರೆದುಕೊಂಡು ಹೋಗಿದ್ದ. ತುಮಕೂರು ನಗರದ ಸಿಟ್ರಿಯಾ ಹೋಟೆಲ್‍ನಲ್ಲಿ ತಂಗಿದ್ದರು. ಯುವತಿ ಕಿಡ್ನ್ಯಾಪ್ ಮಾಡಿದ ಯುವಕನಿಗೆ ಗೊತ್ತಾಗದಂತೆ ಬೇರೆಯವರ ಮೊಬೈಲ್ ಮೂಲಕ ತುಮಕೂರು ಪೊಲೀಸರಿಗೆ ಕರೆ ಮಾಡಿ ವಿಚಾರ ಮುಟ್ಟಿಸಿದ್ದಳು. ಈ ವಿಷಯ ತಿಳಿದ ಕಿಡ್ನಾಪರ್ಸ್ ಇಂದು ಬೆಳಗ್ಗೆ ಯುವತಿ ಸಮೇತ ಎಸ್ಕೇಪ್ ಆಗಲು ಯತ್ನಿಸಿದ್ದರು.

ತುಮಕೂರಿನ ಹೈವೆ ಪೊಲೀಸರು ಕಿಡ್ನಾಪರ್ಸ್ ಗ್ಯಾಂಗನ್ನು ಬೆನ್ನಟ್ಟಿದ್ದಾರೆ. ಈ ವೇಳೆ ಕಾರು ಮತ್ತು ಯುವತಿಯನ್ನು ಬಿಟ್ಟು ಆರೋಪಿಗಳು ಎಸ್ಕೇಪ್ ಆಗಿದ್ದಾರೆ. ಕಿಡ್ನ್ಯಾಪರ್ಸ್ ಪತ್ತೆಗಾಗಿ ಬಲೆ ಬೀಸಲಾಗಿದೆ ಎಂದು ಕೋಲಾರ ಎಸ್‍ಪಿ ಕಾರ್ತಿಕ್ ರೆಡ್ಡಿ ತಿಳಿಸಿದ್ದಾರೆ.

Related Articles

Back to top button