Belagavi NewsBelgaum NewsKannada NewsKarnataka News

ಮದುವೆಯಲ್ಲಿ ಕಳ್ಳತನ : ಕಳ್ಳನ ಬಂಧಿಸಿದ ಟಿಳಕವಾಡಿ ಪೊಲೀಸರು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮದುವೆ ಸಮಾರಂಭದಲ್ಲಿ ಕಳ್ಳತನ ಮಾಡಿದ್ದವನನ್ನು ಟಿಳಕವಾಡಿ ಪೊಲೀಸರು ಬಂಧಿಸಿದ್ದಾರೆ.

ದಿನಾಂಕ 13-4-2024 ಹಾಗು 21.4.2024 ರಂದು ತಿಲಕವಾಡಿ ಮಹಾವೀರ್ ಭವನ ಹಾಗೂ ಸಿಟಿ ಹಾಲ್ ಮದುವೆ ಸಮಾರಂಭಗಳಲ್ಲಿ ಆಭರಣಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದ ಆರೋಪಿ- ಸೋಹೈಲ್ ಮೌಲಾ ತಾಶಾವಾಲೆ (26 ವರ್ಷ) ಸಾ.ಉಜ್ವಲ ನಗರ ಬೆಳಗಾವಿ

Home add -Advt

ಈತನನ್ನು ಬಂಧಿಸಲಾಗಿದೆ.

ಕಪಿಲ್ ದೇವ್ ಗಡದ ಪಿ.ಐ ತಿಲಕವಾಡಿ ಠಾಣೆ ಹಾಗೂ ಅವರ ತಂಡ ಪತ್ತೆ ಮಾಡಿ, ಅವನು ಕಳ್ಳತನ ಮಾಡಿದ್ದ 4.10 ಲಕ್ಷ ರೂ. ಮೌಲ್ಯದ ಒಟ್ಟು 58.4 ಗ್ರಾಂ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡು, ಆತನ ವಿರುದ್ಧ ಕಾನೂನು ಕ್ರಮ ಜರುಗಿಸಿ ತನಿಖೆ ಮುಂದುವರೆಸಲಾಗಿದೆ.

ಈ ಪ್ರಕರಣಗಳಲ್ಲಿಯ ಆರೋಪಿತನನ್ನು ಬಂಧಿಸುವಲ್ಲಿ ಶ್ರಮಿಸಿದ ಪಿಐ ತಿಲಕವಾಡಿ ಹಾಗೂ ಅವರ ತಂಡವನ್ನು ಪೊಲೀಸ್ ಆಯುಕ್ತರು ಬೆಳಗಾವಿ ನಗರ ಹಾಗೂ ಡಿಸಿಪಿಗಳು ಶ್ಲಾಘಿಸಿದ್ದಾರೆ.

Related Articles

Back to top button