Latest

ನಕಲಿ ಮದ್ಯ ದುರಂತ: 72 ಜನರ ಸಾವು

ಪ್ರಗತಿವಾಹಿನಿ ಸುದ್ದಿ, ನವದೆಹಲಿ

ಉತ್ತರ ಪ್ರದೇಶ ಹಾಗೂ ಉತ್ತರಾಖಂಡದಲ್ಲಿ ನಕಲಿ ಮದ್ಯ ಸೇವಿಸಿ ನಿರಂತರವಾಗಿ ಜನರು ಸಾವಿಗೀಡಾಗುತ್ತಿದ್ದು, ಸತ್ತವರ ಸಂಖ್ಯೆ 72ಕ್ಕೇರಿದೆ.

ಉತ್ತರಾಖಂಡದಲ್ಲಿ 28 ಜನ, ಪಶ್ಚಿಮ ಉತ್ತರ ಪ್ರದೇಶದದಲ್ಲಿ 36 ಜನ, ಕುಷಿನಗರದಲ್ಲಿ 8 ಜನ ಸಾವನ್ನಪ್ಪಿದ್ದಾರೆ. ಇನ್ನೂ 50 ಜನರ ಸ್ಥಿತಿ ಗಂಭೀರವಾಗಿದೆ. ಘಟನೆ ಸಂಬಂಧ ಕುಷಿನಗರ ಜಿಲ್ಲೆಯಲ್ಲಿ 9 ಮಂದಿಯನ್ನು ಬಂಧಿಸಲಾಗಿದೆ.  ಅಬಕಾರಿ ಇಲಾಖೆಯ 13 ಅಧಿಕಾರಿಗಳನ್ನು ವಜಾ ಮಾಡಲಾಗಿದೆ. ಮದ್ಯ ದುರಂತದ ಬಗ್ಗೆ ತನಿಖೆಗೆ ಆದೇಶಿಸಲಾಗಿದ್ದು,  ಮೃತರ ಕುಟುಂಬಗಳಿಗೆ ತಲಾ ಎರಡು ಲಕ್ಷ ರೂಪಾಯಿ ಪರಿಹಾರ ಘೋಷಿಸಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button