Kannada NewsKarnataka News
ಬೆಳಗಾವಿ ಪಿಎಸ್ಐ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿಯ ಪಿಎಸ್ಐ ಒಬ್ಬರ ವಿರುದ್ಧ ಅತ್ಯಾಚಾರ, ವಂಚನೆ ಪ್ರಕರಣ ದಾಖಲಾಗಿದೆ.
ಪೊಲೀಸ್ ವೈರ್ ಲೆಸ್ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಲಾಲಸಾಬ್ ನದಾಫ್ ಎನ್ನುವ ಪಿಎಸ್ಐ ಮದುವೆಯಾಗುವುದಾಗಿ ತನ್ನನ್ನು ಬಳಸಿಕೊಂಡು ವಂಚಿಸಿದ್ದಾರೆ ಎಂದು ಯುವತಿಯೊಬ್ಬಳು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಯುವತಿಯೊಂದಿಗೆ ಪಿಎಸ್ಐ ಸಂಬಂಧ ಹೊಂದಿದ್ದರು. ನಂತರ ಆಕೆ ಮದುವೆಯಾಗುವಂತೆ ಕೋರಿದಾಗ ಆತ ನಿರಾಕರಿಸಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಮಹಿಳೆ ದೂರು ದಾಖಲಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆೆ ನಡೆಸುತ್ತಿದ್ದಾರೆ.
ಬೆಳಗಾವಿ ನಾಗರಿಕರ ಗಮನಕ್ಕೆ: ನೀರು ಸರಬರಾಜು ವ್ಯತ್ಯಯ
https://pragati.taskdun.com/attention-belagavi-citizens-water-supply-variability/




