Latest

ಯುವತಿಯರ ಅಶ್ಲೀಲ ಫೋಟೋ ತೆಗೆದು ಬ್ಲ್ಯಾಕ್ ಮೇಲ್; ಮಸಾಜ್ ಸೆಂಟರ್ ಹೆಸರಲ್ಲಿ ಸುಲಿಗೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮಸಾಜ್ ಸೆಂಟರ್ ಹೆಸರಲ್ಲಿ ಸುಲಿಗೆ ಮಾಡುತ್ತಿದ್ದ 6 ಆರೋಪಿಗಳನ್ನು ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಶಿವಕುಮಾರ್, ರಘು, ಮೈಕಲ್ ರಾಜ್, ಸೆಲ್ವರಾಜ್, ತಿಮ್ಮಪ್ಪ ಮತ್ತು ಮನುಕುಮಾರ್ ಎಂದು ಗುರುತಿಸಲಾಗಿದೆ.

ಮಸಾಜ್ ಸೆಂಟರ್ ಗೆ ಬರುತ್ತಿದ್ದ ಯುವತಿಯರ ಅಶ್ಲೀಲ ಫೋಟೋ ತೆಗೆದು ಬಳಿಕ ಬ್ಲ್ಯಾಕ್ ಮೇಲೆ ಮಾಡುತ್ತಿದ್ದರು. ಅಲ್ಲದೇ ಗ್ರಾಹಕನಾಗಿ ಬಂದಿದ್ದ ಯುವಕನೊಬ್ಬನಿಗೆ ಹೆದರಿಸಿ ಹಣ ಹಾಗೂ ಚಿನ್ನಾಭರಣ ದೋಚಿದ್ದರು. ಈ ಹಿನ್ನೆಲೆಯಲ್ಲಿ ಯುವಕ ಕುಮಾರಸ್ವಾಮಿ ಲೇಔಟ್ ಠಾಣೆಗೆ ದೂರು ನೀಡಿದ್ದ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇದೀಗ 6 ಖದೀಮರನ್ನು ಬಂಧಿಸಿದ್ದಾರೆ.

Related Articles

Back to top button