Latest

ಕೇಂದ್ರದ ಪ್ರಸ್ತಾಪವನ್ನು ತಿರಸ್ಕರಿಸಿದ ರೈತರು

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ನೂತನ ಕೃಷಿ ತಿದ್ದುಪಡಿ ಕಾಯ್ದೆಗೆ 8 ತಿದ್ದುಪಡಿ ಮಾಡಲು ಕೇಂದ್ರ ಸರ್ಕಾರ ಸಿದ್ಧವಾಗಿದ್ದು, ಈ ಕುರಿತು ನೀಡಿದ ಪ್ರಸ್ತಾಪವನ್ನು ರೈತರು ತಿರಸ್ಕರಿಸಿದ್ದಾರೆ.

ಕಳೆದ 14ದಿನಗಳಿಂದ ಸಿಂಘು ಗಡಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದು, ರೈತರಿಗೆ ಲಿಖಿತ ರೂಪದ ಪ್ರಸ್ತಾಪವನ್ನು ಕೇಂದ್ರ ಸರ್ಕಾರ ತಲುಪಿಸಿದ್ದು, ಇದನ್ನು ತಿರಸ್ಕರಿಸಿರುವ ರೈತ ಮುಖಂಡರು ಡಿಸೆಂಬರ್ 14ರಂದು ರಾಷ್ಟ್ರವ್ಯಾಪಿ ಧರಣಿಗೆ ಕರೆ ನೀಡಿದ್ದಾರೆ.

Home add -Advt

ಈ ನಡುವೆ ರಾಷ್ಟ್ರಪತಿ ಭವನಕ್ಕೆ ಶರತ್ ಪವಾರ್ ನೇತೃತ್ವದ 5 ವಿಪಕ್ಷಗಳ ನಾಯಕರು ಭೇಟಿ ನೀಡಿದ್ದು, ರಾಷ್ಟ್ರಪತಿಗಳ ಮಧ್ಯಪ್ರವೇಶಕ್ಕೆ ಮನವಿ ಸಲ್ಲಿಸುವ ಸಾಧ್ಯತೆಯಿದೆ.

Related Articles

Back to top button