Kannada NewsKarnataka NewsLatest

*ಇಟ್ಟಿಗೆ ತಯಾರಿಕೆಗೆಂದು ಸಂಗ್ರಹಿಸಿದ್ದ ನೀರಿನಲ್ಲಿ ಬಿದ್ದು ಮೂರು ವರ್ಷದ ಮಗು ದುರ್ಮರಣ*

ಪ್ರಗತಿವಾಹಿನಿ ಸುದ್ದಿ; ಮುಂಡಗೋಡ: ಇಟ್ಟಿಗೆ ತಯಾರಿಕೆಗೆ ಸಂಗ್ರಹಿಸಿಟ್ಟಿದ್ದ ನೀರಿಗೆ ಬಿದ್ದು ಮೂರು ವರ್ಷದ ಮಗು ಸಾವನ್ನಪ್ಪಿರುವ ದಾರುಣ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂದಗೋಡ ತಾಲೂಕಿನ ಲಕ್ಕೊಳ್ಳಿ ಗ್ರಾಮದಲ್ಲಿ ನಡೆದಿದೆ.

ಮಾನ್ವಿತ ಮೃತ ಮಗು. ಮಗುವಿನ ತಾಯಿ ಇಟ್ಟಿಗೆ ಕೆಲಸಕ್ಕೆ ತೆರಳುವಾಗ ಮಗು ಮಾನ್ವಿತಾಳನ್ನು ಕರೆತಂದಿದ್ದರು. ತಾಯಿ ತನ್ನ ಕೆಲಸದಲ್ಲಿ ನಿರತರಾಗಿದ್ದಾಗ ಆಟವಾಡುತ್ತಿದ್ದ ಮಗು ಏಕಾಏಕಿ ಸಂಗ್ರಹಿಸಿಟ್ಟಿದ್ದ ನೀರಿನಲ್ಲಿ ಬಿದ್ದಿದೆ. ತಕ್ಷಣ ಮಗುವನ್ನು ಮೇಲಕೆತ್ತಿ ಮುಂಡಗೋಡ ತಾಲೂಕು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಹೆಚ್ಚಿನ ಚಿಕಿತ್ಸೆಗಾಗಿ ತಾಲೂಕು ಆಸ್ಪತ್ರೆ ವೈದ್ಯರು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದ್ದಾರೆ.

Home add -Advt

ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಮಗು ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದೆ.


Related Articles

Back to top button