GIT add 2024-1
Beereshwara 33

ನೇಹಾ ಹಂತಕನಿಗೆ ಗಲ್ಲು ಶಿಕ್ಷೆಗೆ ಆಗ್ರಹ ಮಾಡಿದ್ದೇವೆ: ಸುರ್ಜೆವಾಲಾ

Anvekar 3
Cancer Hospital 2

ಪ್ರಗತಿವಾಹಿನಿ ಸುದ್ದಿ: ರಾಜ್ಯ ಕಾಂಗ್ರೆಸ್ ಪಕ್ಷ ನೇಹಾ ಮಹಿರೇಮಠ ಕೊಲೆ ಮಾಡಿದ ಹಂತಕನಿಗೆ ಗಲ್ಲು ಶಿಕ್ಷೆ ನೀಡಲು ಆಗ್ರಹಿಸಿದೆ ಎಂದು ಕಾಂಗ್ರೆಸ್ ಕರ್ನಾಟಕ ಉಸ್ತುವಾರಿ ರಣದೀಪ್ ಸುರ್ಜೆವಾಲಾ ಹೇಳಿಕೆ ನೀಡಿದ್ದಾರೆ.

ಬುಧವಾರ ಹುಬ್ಬಳ್ಳಿಯಲ್ಲಿರುವ ನೇಹಾ ಹಿರೇಮಠ ಅವರ ಪೋಷಕರ ಮನೆಗೆ ಸುರ್ಜೆವಾಲಾ ತೆರಳಿ ಸಾಂತ್ವನ ಹೇಳಿದ್ದಾರೆ. ಈ ವೇಳೆ ಕುಟುಂಬಕ್ಕೆ ಕರ್ನಾಟಕ ಸರ್ಕಾರ ಸಂಪೂರ್ಣ ನ್ಯಾಯ ಒದಗಿಸುವ ಭರವಸೆಯನ್ನು ನೀಡಿದರು.

Emergency Service

ಈ ವೇಳೆ ಮಾತನಾಡಿದ ಅವರು, ಪ್ರಕರಣದ ತನಿಖೆಯನ್ನು ಸಿಐಡಿಗೆ ಒಪ್ಪಿಸಲಾಗಿದೆ. ಪ್ರಕರಣವನ್ನು 120 ದಿನಗಳಲ್ಲಿ ಇತ್ಯರ್ಥಗೊಳಿಸಲು ಕೋರಸಲಾಗಿದೆ. ಸಿದ್ದರಾಮಯ್ಯ ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷ ಹಂತಕನಿಗೆ ಗಲ್ಲು ಶಿಕ್ಷೆ ನೀಡಲು ಆಗ್ರಹಿಸಲಿದೆ ಎಂದು ತಿಳಿಸಿದರು.

ನೀವು ಯಾವ ಕಾರಣಕ್ಕೂ ಹೆದರುವ ಅವಶ್ಯಕತೆಯಿಲ್ಲ, ರಾಜ್ಯ ಸರ್ಕಾರ ನಿಮ್ಮೊಂದಿಗಿದೆ. ನಾನು ನಿಮ್ಮಮಗಳ ಹತ್ಯೆಗೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಜೊತೆ ಮಾತಾಡಿದ್ದೇನೆ. ಅವರು ಹೆಚ್‌ಕೆ ಪಾಟೀಲ್ ಅವರಿಗೆ ಹೇಳಿದ ಮಾತುಗಳನ್ನೇ ನನಗೂ ಹೇಳಿದ್ದಾರೆ. ನೀವು ಧೈರ್ಯವಾಗಿರಿ ಎಂದು ಹಿರೇಮಠ ದಂಪತಿಗೆ ಹೇಳಿದರು.

Laxmi Tai add
Bottom Add3
Bottom Ad 2