Election NewsKannada NewsKarnataka NewsPolitics

ಸೂಲಿಬೆಲೆ ಭಾಷಣದ ವೇಳೆ ಚುನಾವಣಾ ಅಧಿಕಾರಿಯನ್ನು ತಳ್ಳಿದ ಬಿಜೆಪಿ ಕಾರ್ಯಕರ್ತರು 

ಪ್ರಗತಿವಾಹಿನಿ ಸುದ್ದಿ:  ಚಕ್ರವರ್ತಿ ಸೂಲಿಬೆಲೆ ಅವರ ಭಾಷಣ ಮಾಡುತ್ತಿದ್ದ ಕಾರ್ಯಕ್ರಮದಲ್ಲಿ ಬಿಜೆಪಿ ಕಾರ್ಯಕರ್ತರು ಚುನಾವಣಾ ಅಧಿಕಾರಿಯನ್ನು ತಳ್ಳಿದ ಘಟನೆ ಚಾಮರಾಜ ನಗರದಲ್ಲಿ ನಡೆದಿದೆ.‌

ಅನುಮತಿ ಪಡೆದ ಅವಧಿಗಿಂತಲೂ ಹೆಚ್ಚಾಗಿ ಚಕ್ರವರ್ತಿ ಭಾಷಣ ಮಾಡಿದ ಹಿನ್ನೆಲೆಯಲ್ಲಿ ಕಾರ್ಯಕ್ರಮ ನಿಲ್ಲಿಸಲು ಬಂದ ಚುನಾವಣಾ ಅಧಿಕಾರಿಯನ್ನು ಬಿಜೆಪಿ ಕಾರ್ಯಕರ್ತರು ತಳ್ಳಾಟ ನಡೆಸಿರುವ ಘಟನೆ ನಡೆದಿದೆ.‌ ಸಾಯಂಕಾಲ 5 ರಿಂದ 8 ಗಂಟೆಯವೆರೆಗೆ ಕಾರ್ಯಕ್ರಮ ನಡೆಸಲು ಅನುಮತಿ ನೀಡಲಾಗಿತ್ತು. ಆದರೆ ಅವಧಿ ಮೀರಿದರೂ ಚಕ್ರವರ್ತಿ ಸೂಲಿಬೆಲೆ ಅವರು ಭಾಷಣ ಮಾಡುತ್ತಿದ್ದರು. ಸ್ಥಳಕ್ಕೆ ಬಂದ ಚುನಾವಣಾ ಅಧಿಕಾರಿ ಭಾಷಣ ನಿಲ್ಲಿಸುವಂತೆ ಸನ್ನೆ ಮಾಡಿದ್ದಾರೆ.

Home add -Advt

ಆದರೆ ಯಾವುದೇ ಪ್ರತಿಕ್ರಿಯೆ ಸಿಗದ ಕಾರಣ ವೇದಿಕೆ ಏರಿ ಸೂಲಿಬೆಲೆ ಬಳಿ ಸಮಯ ಮೀರಿದೆ ಭಾಷಣ ನಿಲ್ಲಿಸಿ ಎಂದು ಹೇಳಿದ್ದಾರೆ. ಈ ವೇಳೆ ವೇದಿಕೆ ಮೇಲೆ ಬಂದ ಕಾರ್ಯಕರ್ತರು ಹಾಗೂ ಅಧಿಕಾರಿಯ ಮಧ್ಯೆ ಮಾತಿನ ಚಕಮಕಿ ನಡೆದಿದ್ದು ಅವರನ್ನು ವೇದಿಕೆಯಿಂದ ಕೆಳಗಿಳಿಸಿದ್ದಾರೆ.

ಕರ್ತವ್ಯ ನಿರತ ಅಧಿಕಾರಿಯ ಜೊತೆ ಅನುಚಿತವಾಗಿ ವರ್ತಿಸಬೇಡಿ ಎಂದು ಚಕ್ರವರ್ತಿ ಸೂಲಿಬೆಲೆ ಅವರು ಹೇಳುತ್ತಿದ್ದರೂ ಕೇಳದೆ ಅವರನ್ನು ಕೆಳಗಿಳಿಸಿದ್ದು ಬಳಿಕ ಸೂಲಿಬೆಲೆ ಅವರು ಭಾಷಣ ನಿಲ್ಲಿಸಿದ್ದಾರೆ.

Related Articles

Back to top button