Kannada NewsKarnataka NewsPolitics

*ವೈಜ್ಞಾನಿಕ ಮಾನದಂಡದ ಆಧಾರದಲ್ಲೇ ಬರ ಘೋಷಣೆ: ಸಿಎಂ ಡಿ.ಕೆ.ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ : ರಾಜ್ಯದ ಎಲ್ಲೆಡೆ ಬರ ಘೋಷಿಸಬೇಕು ಎಂಬ ಕೂಗು ಕೇಳಿಬರುತ್ತಿದೆ, ಆದರೆ ಕೇಂದ್ರ ಮತ್ತು ರಾಜ್ಯದ ಮಾರ್ಗಸೂಚಿ ಪ್ರಕಾರವೇ ನಿರ್ಧಾರ ಆಗಬೇಕು ಎಂದು ಸಿಎಂ ಡಿ.ಕೆ ಶಿವಕುಮಾರ್ ಹೇಳಿದರು. 

ಹುಬ್ಬಳ್ಳಿಯಲ್ಲಿ ಮಾಧ್ಯಮಗಳ ಜೊತೆ ಮಾತನಡಿದ ಅವರು, ವೈಜ್ಞಾನಿಕ ತಪಾಸಣೆ ಬಳಿಕವಷ್ಟೇ ಮುಂದಿನ ಹೆಜ್ಜೆ ಇಡಲಾಗುವುದು, ಅಲ್ಲಿಯವರೆಗೆ ರೈತರು ಸಹಕರಿಸಬೇಕು ಎಂದಿದ್ದಾರೆ.

ಕೇವಲ 101 ತಾಲ್ಲೂಕುಗಳನ್ನು ಪಟ್ಟಿಗೆ ಸೇರಿಸಿದ್ದಕ್ಕೆ ಅಸಮಾಧಾನ ಇರುವುದು ನಿಜ, ಆದರೆ ರಾಜಕೀಯ ಲಾಭಕ್ಕಾಗಿ ಘೋಷಣೆ ಮಾಡಿದರೆ ಕೇಂದ್ರ ತಂಡ ಪರಿಶೀಲಿಸಿ ತಪ್ಪು ವರದಿ ಎಂದು ಹೇಳಿದರೆ ಯಾರು ಹೊಣೆ ಎಂದು ಪ್ರಶ್ನಿಸಿದರು. 

ಸಚಿವರು ಜಿಲ್ಲಾ ಪ್ರವಾಸ ಮಾಡಿ ವರದಿ ಕೊಟ್ಟಿದ್ದು, ಅಧಿಕಾರಿಗಳು ಅದನ್ನು ಪರಿಶೀಲಿಸುತ್ತಿದ್ದಾರೆ. ಕೆಲವೆಡೆ ಹಸಿರು ಕಂಡರೂ ಬೆಳೆ ಹಾನಿಯಾಗಿದೆ. ತಮ್ಮ ಸ್ವಕ್ಷೇತ್ರ ಕನಕಪುರದಲ್ಲೂ ಬರ ಇದ್ದರೂ ಪಟ್ಟಿಯಲ್ಲಿ ಇಲ್ಲ ನಿಯಮ ಮೀರಿ ಘೋಷಿಸಲು ಸಾಧ್ಯವಿಲ್ಲ. ವಿರೋಧ ಪಕ್ಷಗಳು ಸದನದಲ್ಲಿ ಬರದ ಬಗ್ಗೆ ಚರ್ಚಿಸದೆ ರಾಜಕಾರಣ ಮಾಡುತ್ತಿವೆ ಎಂದು ಟೀಕಿಸಿದರು. 

Related Articles

Back to top button