Karnataka News

*ಇಂದಿರಾ ಕ್ಯಾಂಟೀನ್ ನ ಕೋಟ್ಯಾಂತರ ಹಣ ಅವ್ಯವಹಾರ: ಬೆಂಗಳೂರು ದಕ್ಷಿಣ ವಲಯ ಉಪ ಆರೋಗ್ಯಾಧಿಕಾರಿ ಸಸ್ಪೆಂಡ್*

ಪ್ರಗತಿವಾಹಿನಿ ಸುದ್ದಿ: ಇಂದಿರಾ ಕ್ಯಾಂಟೀನ್ ಗೆ ಮೀಸಲಾದ ಕೋಟ್ಯಂತರ ರೂಪಾಯಿ ಹಣ ದುರುಪಯೋಗ ಆರೋಪದಲ್ಲಿ ಬೆಂಗಳೂರು ದಕ್ಷಿಣ ಉಪ ಆರೋಗ್ಯಾಧಿಕಾರಿಯೋರ್ವರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.

ಡಾ.ಕಲ್ಪನಾ.ಪಿ ಸಸ್ಪೆಂಡ್ ಆದ ಆರೋಗ್ಯಾಧಿಕಾರಿ. ಚಿಫ್ ಟಾಕ್ ಫುಡ್ ಆಂಡ್ ಹಾಸ್ಪಿಟಾಲಿಟಿ ಸರ್ವಿಸ್ ಪ್ರೈ.ಲಿಮಿಟೆಡ್ ಗೆ ಪಾವತಿಸಬೇಕಿದ್ದ ಹಣಕ್ಕಿಂತಲೂ ಅಧಿಕ ಹಣವನ್ನು ಪಾವತಿ ಮಾಡಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಚಿಫ್ ಟಾಕ್ ಫುಡ್ ಆಂಡ್ ಹಾಸ್ಪಿಟಾಲಿಟಿ ಸರ್ವಿಸ್ ಪ್ರೈ.ಲಿಮಿಟೆಡ್ 2,27,34,474 ರೂ ಬಿಲ್ ಕೇಳಿತ್ತು. ಇದನ್ನು ಸೂಕ್ತವಾಗಿ ಪರಿಶೀಲಿಸದೇ 9,72,21,787 ರೂ ಗಳನ್ನು ಪಾವತಿ ಮಾಡಿದ್ದಾರೆ. ಆರೋಗ್ಯಾಧಿಕಾರಿಯ ನಿರ್ಲಕ್ಷ್ಯದಿಂದಾಗಿ ಚಿಫ್ ಟಾಕ್ ಫುಡ್ ಆಂಡ್ ಹಾಸ್ಪಿಟಾಲಿಟಿ ಸರ್ವಿಸ್ ಪ್ರೈ.ಲಿಮಿಟೆಡ್ ಗೆ 7,00,12,396 ರೂ ಹೆಚ್ಚಿನ ಮೊತ್ತ ಪಾವತಿಯಾಗಿದೆ.

ಕರ್ತವ್ಯ ಲೋಪ ಹಿನ್ನೆಲೆಯಲ್ಲಿ ಇದ್ಗ ಉಪ ಆರೋಗ್ಯಾಧಿಕಾರಿ ಡಾ.ಕಲ್ಪನಾ ಅವರನ್ನು ಬಿಬಿಎಂಪಿ ವಿಶೇಷ ಆಯುಕ್ತರು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button