Latest

ಅನಂತಕುಮಾರ ಹೆಗಡೆ ಸೇರಿದಂತೆ 17 ಸಂಸತ್ ಸದಸ್ಯರಿಗೆ ಕೊರೊನಾ

ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ಸಂಸದ ಅನಂತಕುಮಾರ ಹೆಗಡೆ ಸೇರಿದಂತೆ 17 ಮಂದಿ ಸಂಸತ್ ಸದಸ್ಯರುಗಳಿಗೆ ಕೊರೊನ ವೈರಸ್ ಇರುವುದು ದೃಢಪಟ್ಟಿದೆ.
ಸೋಮವಾರ ಬೆಳಿಗ್ಗೆ ಮುಂಗಾರು ಅಧಿವೇಶನ ಆರಂಭವಾಗುವ ಮೊದಲು ನಡೆಸಲಾಗಿರುವ ಕಡ್ಡಾಯ ಕೋವಿಡ್-19 ಪರೀಕ್ಷೆಯಲ್ಲಿ ಮೀನಾಕ್ಷಿ ಲೇಖಿ, ಅನಂತಕುಮಾರ ಹೆಗಡೆ, ಪರ್ವೇಶ್ ಸಾಹಿಬ್ ಸಿಂಗ್ ಸೇರಿದಂತೆ 17 ಮಂದಿಗೆ ಸೋಂಕು ದೃಢಪಟ್ಟಿದೆ.
ಸೆಪ್ಟಂಬರ್ 13 ಹಾಗೂ 14 ರಂದು ಪಾರ್ಲಿಮೆಂಟ್ ಹೌಸ್‌ನಲ್ಲಿ ಲೋಕಸಭಾ ಸದಸ್ಯರುಗಳಿಗೆ ಕೋವಿಡ್-19 ಪರೀಕ್ಷೆ ನಡೆಸಲಾಗಿದೆ. ಕೊರೋನ ಸೋಂಕಿತ ಎಂಪಿಗಳ ಪೈಕಿ ಬಿಜೆಪಿ ಪಕ್ಷದವರೇ 12 ಮಂದಿ ಇದ್ದರು. ವೈಆರ್‌ಎಸ್ ಕಾಂಗ್ರೆಸ್‌ನ ಇಬ್ಬರು, ಶಿವಸೇನೆ, ಡಿಎಂಕೆ ಹಾಗೂ ಆರ್‌ಎಲ್‌ಪಿ ಪಕ್ಷಗಳ ತಲಾ ಒಬ್ಬರು ಸಂಸದರಿದ್ದಾರೆ.

Related Articles

Back to top button