Belagavi NewsBelgaum NewsKannada NewsKarnataka NewsTravel

*ರದ್ದಾಗಿದ್ದ ರೈಲುಗಳು ಮತ್ತೆ ಆರಂಭ*

ಪ್ರಗತಿವಾಹಿನಿ ಸುದ್ದಿ: ವಂದಾಲ ಹಾಗೂ ಬಸವನ ಬಾಗೇವಾಡಿ ರೋಡ್ ನಿಲ್ದಾಣಗಳ ನಡುವಿನ ಲೆವೆಲ್ ಕ್ರಾಸಿಂಗ್ (ಎಲ್‌ಸಿ ಸಂಖ್ಯೆ 62) ಕಾಮಗಾರಿಗಳ ಹಿನ್ನೆಲೆ ಭಾಗಶಃ ರದ್ದುಗೊಂಡಿದ್ದ ಕೆಳಕಂಡ ರೈಲುಗಳನ್ನು ಇದೀಗ ತಮ್ಮ ನಿಯಮಿತ ಮಾರ್ಗದಲ್ಲಿ ಎಂದಿನಂತೆ ಸಂಚರಿಸಲು ಪುನಃ ಸ್ಥಾಪಿಸಲಾಗಿದೆ.

ರೈಲು ಸಂಖ್ಯೆ 07329 ಎಸ್‌ಎಸ್‌ಎಸ್ ಹುಬ್ಬಳ್ಳಿ–ವಿಜಯಪುರ ವಿಶೇಷ ರೈಲು, ಮಾರ್ಚ್  24ರಂದು, ಬಾಗಲಕೋಟೆ–ವಿಜಯಪುರ ನಡುವಿನ ಭಾಗಶಃ ರದ್ದತಿ ಹಾಗೂ ಬಾಗಲಕೋಟೆಯಲ್ಲಿ ಅಂತ್ಯಗೊಳ್ಳುವಂತೆ ತಿಳಿಸಲಾಗಿತ್ತು. ಇದೀಗ ಈ ರೈಲು ತನ್ನ ಪೂರ್ಣ ನಿಯಮಿತ ಮಾರ್ಗವಾದ ಎಸ್‌ಎಸ್‌ಎಸ್ ಹುಬ್ಬಳ್ಳಿ–ವಿಜಯಪುರದವರೆಗೆ ಸಂಚರಿಸಲಿದೆ. 

ಅದೇ ರೀತಿ, ರೈಲು ಸಂಖ್ಯೆ 07330 ವಿಜಯಪುರ–ಎಸ್‌ಎಸ್‌ಎಸ್ ಹುಬ್ಬಳ್ಳಿ ವಿಶೇಷ ರೈಲು, ಮಾರ್ಚ್ 25ರಂದು  ವಿಜಯಪುರ–ಬಾಗಲಕೋಟೆ ನಡುವೆ ಭಾಗಶಃ ರದ್ದತಿ ಹಾಗೂ ವಿಜಯಪುರ ಬದಲು ಬಾಗಲಕೋಟೆಯಿಂದ ಪ್ರಾರಂಭವಾಗುವಂತೆ ತಿಳಿಸಲಾಗಿತ್ತು. ಇದೀಗ ಈ ರೈಲೂ ತನ್ನ ಪೂರ್ಣ ನಿಯಮಿತ ಮಾರ್ಗವಾದ ವಿಜಯಪುರ–ಎಸ್‌ಎಸ್‌ಎಸ್ ಹುಬ್ಬಳ್ಳಿವರೆಗೆ ಸಂಚರಿಸಲಿದ್ದು, ಪ್ರಯಾಣಿಕರಿಗೆ ಸಂಪೂರ್ಣ ಸೇವೆ ನೀಡಲಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button