Latest

*ಗರ್ಭಪಾತದ ಬಳಿಕ ಮಾರ್ಗ ಮಧ್ಯೆಯೇ ಮಹಿಳೆ ದುರ್ಮರಣ*

ಪ್ರಗತಿವಾಹಿನಿ ಸುದ್ದಿ: ಭ್ರೂಣಲಿಂಗ ಪರೀಕ್ಷೆ ಹಾಗೂ ಗರ್ಭಪಾತ ಅಪರಾಧ ಎಂಬುದು ಗೊತ್ತಿದ್ದರೂ ಇಂತಹ ಪ್ರಕರಣ ಅವ್ಯಾಹತವಾಗಿ ನಡೆಯುತ್ತಲೇ ಇದೆ. ಭ್ರೂಣಲಿಂಗ ಪತ್ತೆ ಬಳಿಕ ಗರ್ಭಪಾತ ಮಾಡಿಸಿದ್ದ ಮಹಿಳೆ ಸಾವನ್ನಪ್ಪಿರುವ ಘಟನೆ ಮಹಾಲಿಂಗಪುರದಲ್ಲಿ ನಡೆದಿದೆ.

Home add -Advt

ಮಹಾರಾಷ್ಟ್ರದ ಕೊಲ್ಹಾಪುರ ಮೂಲದ ಸೋನಾಲಿ (33) ಮೃತ ಮಹಿಳೆ. ಮಹಾಲಿಂಗಪುರ ಆಸ್ಪತ್ರೆಯ ಮಾಜಿ ಆಯಾ ಸೋನಾಲಿಗೆ ಗರ್ಭಪಾತ ಮಾಡಿದ್ದರು. ಸೊನಾಲಿಗೆ ಇಬ್ಬರು ಹೆಣ್ಣುಮಕ್ಕಳಿದ್ದರು. ಮೂರನೆ ಬಾರಿ ಗರ್ಭಿಣಿಯಾಗಿದ್ದ ಸೋನಾಲಿ, ಮಹಾರಾಷ್ಟ್ರದ ಮಿರಜ್ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಮಾಡಿಸಿದಾಗ ಹೊಟ್ಟೆಯಲ್ಲಿ ಹೆಣ್ಣುಮಗು ಇರುವುದು ಗೊತ್ತಾಗಿದೆ. ಮೂರನೆಯದೂ ಹೆಣ್ಣೆಂದು ಗರ್ಭಪಾತ ಮಾಡಿಸಲು ಮಹಾಬಲಿಪುರಕ್ಕೆ ಕವಿತಾ ಬದೆನ್ನವರ್ ಬಳಿ ಮಹಿಳೆ ಬಂದಿದ್ದರು.

ಕವಿತಾ ಮಹಾಬಲಿಪುರ ಆಸ್ಪತ್ರೆಯ ಮಾಜಿ ಆಯಾ. ನಿನ್ನೆ ಬೆಳಿಗ್ಗೆ 9 ಗಂಟೆಗೆ ಬಂದಿದ್ದ ಸೋನಾಲಿಗೆ ಕವಿತಾ ಗರ್ಭಪಾತ ಮಾಡಿಸಿ ಕಳುಹಿಸಿದ್ದರು. ಗರ್ಭಪಾತದ ಬಳಿಕ ಸೋನಾಲಿ ಮೂರ್ಛೆ ಹೋಗಿದ್ದರು ಬಳಿಕ ನಕಲಿ ಆಸ್ಪತ್ರೆಗೆ ಕಳುಹಿಸಲಾಗಿತ್ತು. ಆದರೆ ಮಾರ್ಗ ಮಧ್ಯೆಯೇ ಕಾರಿನಲ್ಲಿ ಸೋನಾಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

Related Articles

Back to top button