National

*ನಾಗರಿಕರನ್ನು ಗುರಿಯಾಗಿಸಿ ಪಾಕ್ ಸೇನೆಯಿಂದ ದಾಳಿ; ಜಮ್ಮುವಿನಲ್ಲಿ ಮನೆ, ಕಟ್ಟಡ, ಕಾರುಗಳು ಧ್ವಂಸ*

ಪ್ರಗತಿವಾಹಿನಿ ಸುದ್ದಿ: ಪಾಕಿಸ್ತಾನ ಸೇನೆ ಭಾರತದ ಮೇಲೆ ಅಪ್ರಚೋದಿತ ದಾಳಿ ಮುಂದುವರೆಸಿದೆ. ಜಮ್ಮುವಿನಲ್ಲಿ ನಾಗರಿಕರನ್ನು, ಹಳ್ಳಿಗಳನ್ನು ಗುರಿಯಾಗಿಸಿಕೊಂಡು ಡ್ರೋನ್ ದಾಳಿ ನಡೆಸಿದ್ದು, ಹಲವರು ಗಾಯಗೊಂಡಿದ್ದಾರೆ.

ಜಮ್ಮುವಿನ ರಿಹಾರ್ಡಿಯಲ್ಲಿ ಪಾಕಿಸ್ತಾನದ ಡ್ರೋನ್ ದಾಳಿಗೆ ಹಲವು ಕಟ್ಟಡಗಳು, ಮನೆಗಳು ಧ್ವಂಸಗೊಂಡಿವೆ. ರಸ್ತೆಯಲ್ಲಿ ನಿಲ್ಲಿಸಿದ್ದ ಕಾರುಗಳು ಸಂಪೂರ್ಣ ಜಖಂಗೊಂಡಿವೆ. ದಾಳಿಯಲ್ಲಿ ಮನೆಯ ಮೇಲ್ಛಾವಣಿ ಸಂಪೂರ್ಣ ಕುಸಿದಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ರಿಹಾರ್ಡಿ ಪ್ರದೇಶದಲ್ಲಿ ಜನರು ಆತಂಕಕ್ಕೀದಾಗಿದ್ದಾರೆ. ಎರಡು ದಿನಗಳಿಂದ ರಾತ್ರಿ ವೇಳೆ ಪಾಕಿಸ್ತಾನ ಸೇನೆ ಡ್ರೋನ್ ದಾಳಿ ನಡೆಸುತ್ತಿತ್ತು. ಆದರೆ ಇಂದು ಮುಂಜಾನೆಯಿಂದಲೇ ದಾಳಿ ಆರಂಭಿಸಿದ್ದು, ನಾಗರಿಕರು ಕಂಗಾಲಾಗಿದ್ದಾರೆ.

ಇಂದು ಮುಂಜಾನೆ 5 ಗಂಟೆ ಸುಮಾರಿಗೆ ರಿಹಾರ್ಡಿಯಲ್ಲಿ ದಾಳಿ ನಡೆದಿದೆ. ಜಮ್ಮುವಿನ ಆಸ್ಪತ್ರೆ, ಶಾಲೆಗಳನ್ನು ಗುರಿಯಾಗಿಸಿಯೂ ಪಾಕ್ ಸೇನೆ ಶೆಲ್ ದಾಳಿ ನಡೆಸಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button