Latest

*ಹೊಸ ಬಾಂಬ್ ಸಿಡಿಸಿದ ಜಗದೀಶ್ ಶೆಟ್ಟರ್*

ಪ್ರಗತಿವಾಹಿನಿ ಸುದ್ದಿ; ಹುಬ್ಬಳ್ಳಿ; ತಮಗೆ ಬಿಜೆಪಿ ಟಿಕೆಟ್ ಕೈ ತಪ್ಪಲು ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ ಕಾರಣ ಎಂದು ಆರೋಪಿಸಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಈಗ ಮತ್ತೊಂದು ಬಾಂಬ್ ಸಿಡಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಜಗದೀಶ್ ಶೆಟ್ಟರ್, ಇಡೀ ದೇಶದಲ್ಲಿ ಬಿ.ಎಲ್.ಸಂತೋಷ್ ವಿರುದ್ಧ ಮಾತನಾಡಿದ್ದು ನಾನೊಬ್ಬನೆ. ನನಗಾದ ಅನ್ಯಾಯ ತೇಜಸ್ವಿನಿ ಅನಂತ ಕುಮಾರ್ ಅವರಿಗೂ ಆಗಿದೆ. ತೇಜಸ್ವಿನಿ ಅನಂತ್ ಕುಮಾರ್ ಅವರಿಗೆ ಟಿಕೆಟ್ ಕೈ ತಪ್ಪಲು ಕೂಡ ಬಿ.ಎಲ್.ಸಂತೋಷ್ ಅವರೇ ಕಾರಣ ಎಂದು ಹೇಳಿದ್ದಾರೆ.

Home add -Advt

ಬಿಜೆಪಿಯಲ್ಲಿ ಲಿಂಗಾಯಿತ ನಾಯಕತ್ವ ಮುಗಿಸುವ ಉದ್ದೇಶವಿತ್ತು. ನಾನು ಬಿಜೆಪಿಯಲ್ಲಿದ್ದಿದ್ದರೆ ನಂಬರ್ ಒನ್ ನಾಯಕನಾಗುತ್ತಿದ್ದೆ. ಪ್ರತಿಸ್ಪರ್ಧಿ ಆಗುತ್ತೇನೆ ಎಂಬ ಕಾರಣಕ್ಕೆ ನನ್ನ ವಿರುದ್ಧ ಷಡ್ಯಂತ್ರ ನಡೆಸಿದರು. ಲಿಂಗಾಯಿತ ನಾಯಕತ್ವ ಇಲ್ಲದೇ ಸರ್ಕಾರ ರಚಿಸಿದ್ದನ್ನು ಅವರಿಗೆ ತೋರಿಸಬೇಕಿತ್ತು. ಅದೇ ಕಾರಣಕ್ಕೆ ಇದೆಲ್ಲವೂ ನಡೆಯುತ್ತಿದೆ ಎಂದು ಗುಡುಗಿದ್ದಾರೆ.

ಕೆಲವರಿಗೆ ನಾನು ಅಡ್ಡಿಯಾಗುತ್ತೇನೆ ಎಂಬ ಕಾರಣಕ್ಕೆ ನನ್ನ ವಿರುದ್ಧ ನೆಗೆಟಿವ್ ಪ್ರಚಾರ ನಡೆಸಿದರು. ಕೆಲವರಿಗೆ ಸಿಎಂ ಆಗಬೇಕು ಎಂಬ ಆಸೆಯಿದೆ. ಸಂತೋಷ್ ವಿರುದ್ಧ ಮಾತನಾಡಿದ್ದು ನಾನೊಬ್ಬನೇ. ಹಾಗಾಗಿ ಇದೆಲ್ಲ ಆಗುತ್ತಿದೆ ಎಂದು ಹೇಳಿದರು.

https://pragati.taskdun.com/karnataka-vidhanasabha-electionvotingmay-10th/


Related Articles

Back to top button