Latest

ಅಥಣಿ ಶಾಸಕ ಮಹೇಶ್ ಕುಮಠಳ್ಳಿ ನಾಪತ್ತೆ, ಪೊಲೀಸ್ ದೂರು ದಾಖಲು

ಪ್ರಗತಿವಾಹಿನಿ ಸುದ್ದಿ, ಅಥಣಿ

ಕಾಂಗ್ರೆಸ್ ಅತೃಪ್ತ ಶಾಸಕ ಮಹೇಶ ಕುಮಠಳ್ಳಿ ನಾಪತ್ತೆಯಾಗಿದ್ದು, ಅವರನ್ನು ಹುಡುಕಿಕೊಂಡಿ ಎಂದು ಅಥಣಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Home add -Advt

ಅಥಣಿ ಯುವ ಕಾಂಗ್ರೆಸ್ ಕಾರ್ಯದರ್ಶಿ ಪ್ರಮೋದ ಹಿರೇಮನಿ ಈ ದೂರು ದಾಖಲಿಸಿದ್ದಾರೆ.  ‘ಮಹೇಶ್ ಕುಮಠಳ್ಳಿ ಹಲವು ದಿನದಿಂದ  ಕಾಣಿಸುತ್ತಿಲ್ಲ. ಅವರನ್ನು ಅಪಹರಿಸಿರುವ ಸಾಧ್ಯತೆ ಇದೆ. ಕೂಡಲೇ ಅವರನ್ನು ಹುಡುಕಿಕೊಡಿ’ ಎಂದು ಪೊಲೀಸರಿಗೆ ದೂರು ನೀಡಲಾಗಿದೆ.

ರಮೇಶ ಜಾರಕಿಹೊಳಿ ಪಾಳೆಯದಲ್ಲಿ ಗುರುತಿಸಿಕೊಂಡಿರುವ ಮಹೇಶ ಕುಮಠಳ್ಳಿ, ಮುಂಬೈಯಲ್ಲಿದ್ದಾರೆನ್ನಲಾಗುತ್ತಿದ್ದು, ಕಾಂಗ್ರೆಸ್ ಪಕ್ಷದ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಎರಡು ಬಾರಿ ನೋಟೀಸ್ ನೀಡಿದ್ದಾರೆ. ಇದೀಗ ಪುನಃ ಗುರುಾರ ನೋಟೀಸ್ ನೀಡಲಾಗಿದ್ದು, ಶುಕ್ರವಾರದ ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗದಿದ್ದಲ್ಲಿ ಶಾಸಕತ್ವ ಅನರ್ಹಗೊಳಿಸುವುದಾಗಿ ಎಚ್ಚರಿಸಲಾಗಿದೆ. 

‘ಕಳೆದ 50 ದಿನಗಳಿಂದ ನಮ್ಮ ಕೈಗೆ ಶಾಸಕರು ಸಿಗುತ್ತಿಲ್ಲ. ಕಳೆದ ತಿಂಗಳು 26ರಂದು ಕೆಲಹೊತ್ತು ಕಾಣಿಸಿಕೊಂಡಿದ್ದರು. ನಂತರ ಪುನಃ ಕಣ್ಮರೆಯಾದರು. ಕ್ಷೇತ್ರದ ಜನರ ಸಮಸ್ಯೆಗಳನ್ನು ಹೇಳಿಕೊಳ್ಳಲು ಶಾಸಕರು ಕೈಗೆ ಸಿಗುತ್ತಿಲ್ಲ. ಯಾವುದೇ ಸಭೆ ಸಮಾರಂಭಗಳನ್ನು ನಡೆಸಿಲ್ಲ. ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಿಲ್ಲ. ಶಾಸಕಾಂಗ ಪಕ್ಷದ ಸಭೆಗೂ ಅವರು ಹಾಜರಾಗಿಲ್ಲ’ ಎಂದು ಪ್ರಮೋದ ಹಿರೇಮನಿ ತಿಳಿಸಿದರು.

ಮಹೇಶ್ ಕುಮಠಳ್ಳಿ ಅವರಿಗೆ ಎರಡು ಸಲ ಪಕ್ಷದ ಮುಖಂಡರು ನೋಟಿಸ್ ನೀಡಿದ್ದರೂ ಉತ್ತರಿಸಿಲ್ಲ. ಅವರನ್ನು ಅಪಹರಿಸಿರುವ ಶಂಕೆ ಇದೆ. ತಕ್ಷಣ ಅವರನ್ನು ಹುಡುಕಿಕೊಡಿ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಮನವಿ ಮಾಡಿದ್ದಾರೆ.

 

Related Articles

Back to top button