Kannada NewsKarnataka NewsPolitics
ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿದ ಅಶೋಕ್
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ರಾಮಮಂದಿರದ ಉದ್ಘಾಟನೆಯನ್ನು ಸಂಭ್ರಮಿಸಲು ಜನಸಾಮಾನ್ಯರು, ಸಂಘ ಸಂಸ್ಥೆಗಳು ಹಮ್ಮಿಕೊಂಡಿರುವ ಕಾರ್ಯಕ್ರಮಗಳಿಗೆ ಹಲವಾರು ಕಡೆ ಪೊಲೀಸರು ಹಾಗೂ ಅಧಿಕಾರಿಗಳು ವಿನಾಕಾರಣ ಅಡ್ಡಿ ಪಡಿಸುತ್ತಿದ್ದಾರೆ ಎಂಬ ದೂರುಗಳು ನನ್ನ ಗಮನಕ್ಕೆ ಬಂದಿದೆ ಎಂದು ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ ಹೇಳಿದ್ದಾರೆ.
ಈ ಕುರತು ಅವರು ಟ್ವೀಟ್ ಮಾಡಿದ್ದಾರೆ. ಹಿಂದೂಗಳ, ರಾಮಭಕ್ತರ ಸಂಭ್ರಮಾಚರಣೆಗೆ ಅಡ್ಡಿ ಬಂದರೆ ನಾವು ಸಹಿಸುವುದಿಲ್ಲ. ರಾಜ್ಯದ ಸಮಸ್ತ ಹಿಂದೂಗಳಲ್ಲಿ ನನ್ನ ಮನವಿ. ಯಾವ ಗೊಡ್ಡು ಬೆದರಿಕೆಗೂ ಹೆದರಬೇಡಿ. ಪೊಲೀಸರು, ಅಧಿಕಾರಿಗಳು, ಜಿಲ್ಲಾಡಳಿತ ತಮ್ಮ ಆಚರಣೆಗೆ ಅಡ್ಡಿ ಪಡಿಸಿದರೆ ಕೂಡಲೇ ನನ್ನ ಕಚೇರಿಯನ್ನ ಸಂಪರ್ಕಿಸಿ ಮಾಹಿತಿ ನೀಡಿ. ನಾಳೆ ಹಿಂದೂಗಳಿಗೆ ಹಬ್ಬದ ದಿನ. ಶ್ರೀರಾಮ ಆಗಮಿಸುವ ಪವಿತ್ರ ದಿನ. ಹಬ್ಬದ ದಿನವೂ ನಿಮ್ಮ ಹಿಂದೂ ವಿರೋಧಿ, ರಾಮ ದ್ವೇಷಿ ಧೋರಣೆ ಮುಂದುವರೆದರೆ ಪರಿಣಾಮ ನೆಟ್ಟಗಿರುವಿದಿಲ್ಲ. ಇದು ಕಾಂಗ್ರೆಸ್ ಸರ್ಕಾರಕ್ಕೆ ನನ್ನ ಎಚ್ಚರಿಕೆ ಎಂದು ಅವರು ತಿಳಿಸಿದ್ದಾರೆ.



