Latest

ಶಿಶುಪಾಲನಾ ರಜೆ: ಮನಸ್ಸಿಗೆ ಬಂದಂತೆ ಪಡೆಯುವಂತಿಲ್ಲ; ಇಲ್ಲಿದೆ ಸ್ಪಷ್ಟೀಕರಣ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯ ಸರಕಾರಿ ಮಹಿಳಾ ನೌಕರರಿಗಾಗಿ ಸರಕಾರ ಈ ವರ್ಷದಿಂದ ಜಾರಿಗೊಳಿಸಿರುವ ಶಿಶುಪಾಲನಾ ರಜೆ ಕುರಿತು ಉಂಟಾಗಿದ್ದ ಹಲವು ಗೊಂದಲಗಳಿಗೆ ತೆರೆ ಎಳೆಯುವ ಪ್ರಯತ್ನವನ್ನು ಸರಕಾರ ಮಾಡಿದೆ.

ವಿಶೇಷವಾಗಿ ಪ್ರಾಥಮಿಕ ಶಾಲೆಗಳಲ್ಲಿ ಈ ರಜೆಯಿಂದಾಗಿ ಆಗುತ್ತಿರುವ ಸಮಸ್ಯೆಗಳ ಹಿನ್ನೆಲೆಯಲ್ಲಿ ಕೆಲವರು ಸ್ಪಷ್ಟೀಕರಣ ಕೋರಿ ಪತ್ರ ಬರೆದಿದ್ದ ಹಿನ್ನೆಲೆಯಲ್ಲಿ ಸರಕಾರ ಸುತ್ತೋಲೆ ಹೊರಡಿಸಿದೆ.

ಪ್ರಾಥಮಿಕ ಶಾಲಾ ಶಿಕ್ಷಕರಿಗೂ ಶಿಶುಪಾಲನಾ ರಜೆ ಅನ್ವಯವಾಗಲಿದೆ. ಆದರೆ ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆಯಾಗದಂತೆ ರಜೆ ಪಡೆಯಬೇಕು ಎಂದು ತಿಳಿಸಲಾಗಿದೆ. ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆದೇ ರಜೆ ಪಡೆಯಬೇಕು.

ಒಮ್ಮೆಲೇ ಒಂದಕ್ಕಿಂತ ಹೆಚ್ಚಿನ ಶಿಕ್ಷಕರು ರಜೆ ಕೋರಿದಲ್ಲಿ ಅತ್ಯಂತ ಕಿರಿಯ ಮಗುವನ್ನು ಹೊಂದಿರುವವರಿಗೆ ಆದ್ಯತೆಯ ಮೇರೆಗೆ ರಜೆ ನೀಡಬೇಕು ಎಂದು ತಿಳಿಸಲಾಗಿದೆ. ಒಮ್ಮೆ ಕನಿಷ್ಠ 15 ದಿನ ಗರಿಷ್ಠ 30 ದಿನ ಮಾತ್ರ ರಜೆ ತೆಗೆದುಕೊಳ್ಳಬಹುದು.

Home add -Advt

ಈ ಸಂಬಂಧ ಅನೇಕ ಗೊಂದಲಗಳಿಗೆ ಸ್ಪಷ್ಟೀಕರಣ ನೀಡುವ ಸುತ್ತೋಲೆ ಇಲ್ಲಿದೆ –

ಶಿಶುಪಾಲನೆ ರಜೆ ಸ್ಪಷ್ಟಿಕರಣ ಆದೇಶ

 

ಶಿಶುಪಾಲನಾ ರಜೆ: ರಾಜ್ಯ ಸರಕಾರದಿಂದ ಐತಿಹಾಸಿಕ ಆದೇಶ; ಇಲ್ಲಿದೆ ಸಮಗ್ರ ಮಾಹಿತಿ

ಶಿಶುಪಾಲನಾ ರಜೆ ಮಂಜೂರು ಮಾಡಿದ ಬಿಇಒ – ರಾಜ್ಯದ ಮೊದಲ ಪ್ರಕರಣ?

Related Articles

Back to top button