Latest

ಎಸ್ಪಿ ಶೋಭಾ ಕಟಾವ್ಕರ್ ನಿಗೂಢ ರಿತೀಯಲ್ಲಿ ಸಾವು

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – 53 ವರ್ಷದ  ಎಸ್ಪಿ ಶೋಭಾ ಕಟಾವ್ಕರ್ ಮನೆಯಲ್ಲೇ ಶವವಾಗಿ ಪತ್ತೆಯಾಗಿದ್ದಾರೆ. ಆದರೆ ಸಾವಿಗೆ ಕಾರಣ ಗೊತ್ತಾಗಿಲ್ಲ.

ಬೆಂಗಳೂರಿನ ಪುಟ್ಟೇನಳ್ಳಿಯಲ್ಲಿರುವ ಮನೆಯಲ್ಲಿ ಅವರು ಮೃತರಾಗಿದ್ದಾರೆ. ಮನೆಯವರೆಲ್ಲ ಹಾಸನಕ್ಕೆ ತೆರಳಿದ್ದರು. ಶೋಭಾ ಒಬ್ಬರೇ ಮನೆಯಲ್ಲಿದ್ದರು. ಹಾಸನದಿಂದ ಫೋನ್ ಮಾಡಿದರೂ ಅವರು ರಿಸೀವ್ ಮಾಡದ್ದರಿಂದ ಸೆಕ್ಯುರಿಟಿಗೆ ಫೋನ್ ಮಾಡಿ ಪರಿಶೀಲಿಸಲು ಸೂಚಿಸಲಾಯಿತು. ಆಗ ಅವರು ಮೃರಾಗಿರುವುದು ಗೊತ್ತಾಗಿದೆ.

Home add -Advt

ಶೋಭಾ ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ ಎಂದು ಪ್ರಾಥಮಿಕ ಮಾಹಿತಿಯಿಂದ ಗೊತ್ತಾಗಿದೆ. ಪುಟ್ಟೇನಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶೋಭಾ ಕಲ್ಬುರ್ಗಿಯ ಪೊಲೀಸ್ ತರಬೇತಿ ಶಾಲೆಯಲ್ಲಿದ್ದರು. ಈಚೆಗೆ ಅವರನ್ನು ಬೆಂಗಳೂರಿನ ವಿಶೇಷ ವಿಭಾಗಕ್ಕೆ ವರ್ಗಾಯಿಸಲಾಗಿತ್ತು.

ಬೆಳಗಾವಿಯ ಕಾಲೇಜಿನಲ್ಲಿ ಘಟನೆ: ಶಿಕ್ಷಕಿಗೆ ಕಿರುಕುಳ ನೀಡುತ್ತಿದ್ದ ಉಪನ್ಯಾಸಕನಿಗೆ ಮಹಿಳಾ ಸಿಬ್ಬಂದಿಯಿಂದ ಧರ್ಮದೇಟು

 

Related Articles

Back to top button