Belagavi NewsBelgaum NewsKannada NewsKarnataka News

*ವಾರ್ಕರಿ ಮಂಡಳಿಗಳ ಸಮಾವೇಶ: ಪೂರ್ವಭಾವಿ ಸಭೆ ನಡೆಸಿದ ಚನ್ನರಾಜ ಹಟ್ಟಿಹೊಳಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿ ಗ್ರಾಮೀಣ ಕ್ಷೇತ್ರದ ಬೆನಕನಹಳ್ಳಿಯಲ್ಲಿ ವಾರ್ಕರಿ ಮಂಡಳಗಳ ಸಮಾವೇಶ ನಡೆಯಲಿರುವ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಗುರುವಾರ ಸ್ಥಳಕ್ಕೆ ತೆರಳಿ ಪೂರ್ವಭಾವಿ ಸಭೆ ನಡೆಸಿದರು. 

ಫೆಬ್ರವರಿ 13 ರಂದು ಸಂಜೆ 4 ಗಂಟೆಗೆ ಹೋಟೆಲ್ ಗಾರ್ಡನ್ ಕೋರ್ಟ್ ಮುಂಭಾಗದಲ್ಲಿ ‘ವಾರ್ಕರಿ ಸಂಪ್ರದಾಯ’ ಮಂಡಳಿಗಳ ಮೇಳಾವ್ ನಡೆಯಲಿದೆ. ಕ್ಷೇತ್ರದ ವಿವಿಧ ಗ್ರಾಮಗಳ ವಾರ್ಕರಿ ಮಂಡಳಿಗಳ ಸಂತರು ಹಾಗೂ ಪ್ರಮುಖ ಮುಖಂಡರೊಂದಿಗೆ ಕಾರ್ಯಕ್ರಮದ ಯಶಸ್ಸಿಗೆ  ಆಗಬೇಕಿರುವ ಸಿದ್ಧತೆಗಳ ಕುರಿತು ಸುದೀರ್ಘವಾಗಿ ಚರ್ಚಿಸಲಾಯಿತು. 

Home add -Advt

ಅತ್ಯಂತ ವ್ಯವಸ್ಥಿತವಾಗಿ ಸಮಾವೇಶ ನಡೆಸಬೇಕು. ಅದಕ್ಕಾಗಿ ವಿವಿಧ ಸಮಿತಿಗಳನ್ನು ರಚಿಸಬೇಕು. ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಲಾಯಿತು. 

Related Articles

Back to top button