Kannada NewsKarnataka NewsLatest

ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಟೀಮ್ ವರ್ಕ್ ನನ್ನ ಗೆಲುವಿಗೆ ಕಾರಣ – ಚನ್ನರಾಜ ಹಟ್ಟಿಹೊಳಿ

ಗೆಲುವಿಗೆ ಸಹಕರಿಸಿದ ಎಲ್ಲರಿಗೂ  ಧನ್ಯವಾದ

 

ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ – ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ಎಲ್ಲ ಮುಖಂಡರ, ಕಾರ್ಯಕರ್ತರ ಟೀಮ್ ವರ್ಕ್ ನನ್ನ ಗೆಲುವಿಗೆ ಕಾರಣ ಎಂದು ಬೆಳಗಾವಿಯಲ್ಲಿ ಗೆಲುವು ಸಾಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿ ಪ್ರತಿಕ್ರಿಯಿಸಿದ್ದಾರೆ.

Home add -Advt

ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನಮ್ಮ ಕಾರ್ಯಕರ್ತರು, ನಮ್ಮ ಜನಪ್ರತಿನಿಧಿಗಳು, ನಮ್ಮ ಮುಖಂಡರ ಮೇಲೆ ನಮಗೆ ವಿಶ್ವಾಸವಿತ್ತು. ಹಾಗಾಗಿಯೇ ಗೆಲುವು ಖಚಿತ ಎಂದು ಮೊದಲಿನಿಂದಲೂ ಹೇಳುತ್ತ ಬಂದಿದ್ದೇವೆ ಎಂದು ತಿಳಿಸಿದರು.

ನಮ್ಮ ಬಗ್ಗೆ ಟೀಕೆ ಮಾಡಿದವರ ಬಗ್ಗೆಯಾಗಲಿ, ಬೇರೆಯವರ ಬಗ್ಗೆಯಾಗಲಿ ನಾನು ಈ ಸಂದರ್ಭದಲ್ಲಿ ಮಾತನಾಡುವುದಿಲ್ಲ. ನನ್ನ ಗೆಲುವಿಗೆ ಸಹಕರಿಸಿದ ಎಲ್ಲರಿಗೂ  ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಚನ್ನರಾಜ ತಿಳಿಸಿದರು.

ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಮಾತನಾಡಿ, ಸತೀಶ್ ಜಾರಕಿಹೊಳಿ ಅವರ ನೇತೃತ್ವವೇ ಗೆಲುವಿಗೆ ಕಾರಣ. ಕೇವಲ ಕಾಂಗ್ರೆಸ್ ಮತಗಳನ್ನು ಹಿಡಿದಿಟ್ಟುಕೊಳ್ಳುವುದೇ ನಮಗೆ ಚಾಲೇಂಜ್ ಆಗಿತ್ತು. ಸತೀಶ್ ಜಾರಕಿಹೊಳಿ ಅವರು ಸ್ವತಃ ತಾವೇ ನಿಂತಿದ್ದೇನೆ ಅನ್ನುವ ರೀತಿಯಲ್ಲಿ ಕೆಲಸ ಮಾಡಿದರು ಎಂದು ಹೇಳಿದರು.

ಬೆಳಗಾವಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿಗೆ ಭರ್ಜರಿ ಗೆಲುವು

Related Articles

Back to top button