Karnataka News

*ಮತ್ತೋರ್ವ ಸಾಫ್ಟ್ ವೇರ್ ಇಂಜಿನಿಯರ್ ಆತ್ಮಹತ್ಯೆಗೆ ಶರಣು*

ಪ್ರಗತಿವಾಹಿನಿ ಸುದ್ದಿ: ಇತ್ತೀಚಿನ ದಿನಗಳಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಗಳು ಆತ್ಮಹತ್ಯೆಗೆ ಶರಣಾಗುತ್ತಿರುವ ಘಟನೆ ಹೆಚ್ಚುತ್ತಿದೆ. ಕೌಟುಂಬಿಕ ಕಲಹಕ್ಕೋ ಅಥವಾ ಮಾನಸಿಕ ಒತ್ತಡದಿಂದಲೋ ಸಾವಿಗೆ ಶರಣಾಗುತ್ತಿರುವುದು ದುರಂತ.

Home add -Advt

ಅಪಾರ್ಟ್ ಮೆಂಟ್ ನಿವಾಸದಲ್ಲಿಯೇ ಟೆಕ್ಕಿಯೊಬ್ಬ ನೇಣಿಗೆ ಕೊರಳೊಡ್ದಿರುವ ಘಟನೆ ಬೆಂಗಳೂರಿನ ಚಿಕ್ಕಬಾಣಾವರದಲ್ಲಿ ನಡೆದಿದೆ. ಪ್ರಶಾಂತ್ ನಾಅಯರ್ (೪೦) ಆತ್ಮಹತ್ಯೆ ಮಾಡಿಕೊಂಡವರು.

ಪ್ರಶಾಂತ್ ನಾಅಯರ್ ಪೂಜಾ ಎಂಬುವವರನ್ನು ವಿವಾಹವಾಗಿದ್ದರು. ದಂಪತಿಗೆ ೮ ವರ್ಷದ ಮಗಳಿದ್ದಾಳೆ. ಆದಾಗ್ಯೂ ಪತಿ-ಪತ್ನಿ ನಡುವೆ ಹಲವು ಭಿನ್ನಾಭಿಪ್ರಯ, ಜಗಳದಿಂದ ಇಬ್ಬರೂ ದೂರಾಗಿ ವಿಚ್ಛೇದನ ಪಡೆದಿದ್ದರು ಎಂದು ಹೇಳಲಾಗುತ್ತಿದೆ.

ಪತ್ನಿಯಿಂದ ದೂರಾದ ಪ್ರಶಾಂತ್ ನಾಯರ್ ಮಾಸಿಕವಾಗಿ ಕುಗ್ಗುತ್ತಾ ಬಂದಿದ್ದರು. ಇದೇ ಕಾರಣಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಪ್ರಶಾಂತ್ ತಂದೆ ಮಗನಿಗೆ ಹಲವು ಬಾರಿ ಕರೆ ಮಾಡಿದರೂ ಸ್ವೀಕರಿಸುತ್ತಿರಲಿಲ್ಲ. ಇದರಿಂದ ತಂದೆ ಮಗನ ಮನೆ ಬಳಿ ಬಂದು ನೋಡಿದ್ದಾರೆ. ಈ ವೇಳೆ ಮಗ ನೇಣಿಗೆ ಕೊರಳೊಡ್ಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.

ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Related Articles

Back to top button