
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮುತಗಾ ಗ್ರಾಮದ ಕಂಚವೀರ ನಗರದಲ್ಲಿರುವ ಶ್ರೀ ಗಣೇಶ ಹಾಗೂ ಶ್ರೀ ಆಂಜನೇಯ ಮಂದಿರಗಳ ನೂತನ ಗೋಪುರ ಹಾಗೂ ಕಾಂಪೌಂಡ್ ನಿರ್ಮಾಣದ ಕಾಮಗಾರಿಗಳಿಗೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅನುದಾನ ಮಂಜೂರಿ ಮಾಡಿ ಕಾಮಗಾರಿಗೆ ಚಾಲನೆ ನೀಡಿದರು.
ಗೋಪುರ ಹಾಗೂ ಕಾಂಪೌಂಡ್ ಕೆಲಸಗಳು ಮುಕ್ತಾಯಗೊಂಡ ನಂತರ ಪೇಂಟಿಂಗ್ ಕೆಲಸಗಳನ್ನು ಕೈಗೊಳ್ಳಲು ಅವರು ಸಂಬಂಧಿಸಿದವರಿಗೆ ಈ ಸಂದರ್ಭದಲ್ಲಿ ಸೂಚಿಸಿದರು.
ಗ್ರಾಮದ ಹಿರಿಯರು, ದೇವಸ್ಥಾನಗಳ ಟ್ರಸ್ಟ್ ಕಮಿಟಿಯವರು, ಯುವ ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳಕರ, ಸದಾನಂದ ದೇಸಾಯಿ, ಶಿವಕುಮಾರ ಕದಂ, ರಮೇಶ ಚಿಕ್ಕೋಡಿ, ಆನಂದ ಗಣಾಚಾರಿ, ಬಿ.ಆರ್. ಸಿಂಗಾರಿ, ಆಪ್ತ ಸಹಾಯಕರು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
ಬೆಳಗಾವಿ ಜಿಲ್ಲೆ ಹಾಗೂ ತಾಲೂಕುಗಳ ಕನ್ನಡ ಸಾಹಿತ್ಯ ಸಮ್ಮೇಳನಗಳ ದಿನಾಂಕ ಪ್ರಕಟ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ