Latest

ನಡುರಸ್ತೆಯಲ್ಲೇ ಝಳಪಿಸಿದ ತಲ್ವಾರ್; ಹಾಡಹಗಲೇ ಯುವಕರ ಪುಂಡಾಟ; ಪೊಲೀಸರ ಮೇಲೂ ಹಲ್ಲೆ

ಪ್ರಗತಿವಾಹಿನಿ ಸುದ್ದಿ; ಬೀದರ್: ಯುವಕರ ಗುಂಪೊಂದು ನಡುರಸ್ತೆಯಲ್ಲಿಯೇ ತಲ್ವಾರ್ ಝಳಪಿಸಿ ಸಾರ್ವಜನಿಕರ ಮೇಲೂ ತಲ್ವಾರ್ ಬೀಸಿರುವ ಘಟನೆ ಬೀದರ್ ನಲ್ಲಿ ನಡೆದಿದೆ.

ಸಿಖ್ ಧರ್ಮದ ಯುಕರ ಗುಂಪು ಹಾಡ ಹಗಲೇ ರಸ್ತೆಯಲ್ಲಿ ತಲ್ವಾರ್ ಹಿಡಿದು ಪುಂಡಾಟ ಮೆರೆದಿದ್ದಾರೆ. ಸಾರ್ವಜನಿಕರ ಮೇಲೂ ತಲ್ವಾರ್ ಬೀಸಿದ್ದಾರೆ. ಯುವಕರ ಪುಂಡಾಟ ತಡೆಯಲು ಮುಂದಾದ ಪೊಲೀಸರ ಮೇಲೂ ತಲ್ವಾರ್ ನಿಂದ ಹಲ್ಲೆ ನಡೆಸಿದ್ದಾರೆ.

Home add -Advt

ಘಟನೆಯಲ್ಲಿ ಕೆಲ ಪೊಲೀಸರು ಹಾಗೂ ಸಾರ್ವಜನಿಕರು ಗಾಯಗೊಂಡಿದ್ದಾರೆ. ಗುರುನಾನಕ್ ಜಯಂತಿ ಆಚರಣೆ ವೇಳೆ ಯುವಕರು ಈ ರೀತಿ ಉದ್ಧಟತನ ಮೆರೆದಿದ್ದು, ತಲ್ವಾರ್ ಹಿಡಿದು ನಡುರಸ್ತೆಯಲ್ಲಿ ಅಬ್ಬರಿಸಿ ಪುಂಡಾಟ ಮೆರೆದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ.

ಮಳಲಿ ಮಸೀದಿ ವಿವಾದ: VHP ಅರ್ಜಿ ಅಂಗೀಕಾರ

https://pragati.taskdun.com/latest/malali-mosque-issuevhp-plea-acceptedmosque-management-board-plea-rejected/

Related Articles

Back to top button