Kannada NewsKarnataka NewsNational

*ಭೀಕರ ಬೆಂಕಿ ಅವಘಡ: ಐವರು ಸಜೀವ ದಹನ *

ಪ್ರಗತಿವಾಹಿನಿ ಸುದ್ದಿ: ಮೂರು ಅಂತಸ್ತಿನ ಕಟ್ಟಡದಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಐವರು ಸಜೀವ ದಹನವಾಗಿರುವ ಘಟನೆ ಕಳೆದ ರಾತ್ರಿ ಗಾಜಿಯಾಬಾದ್ ನ ಹಾಜಿಪುರ ಪ್ರದೇಶದಲ್ಲಿ ಸಂಭವಿಸಿದೆ.

Home add -Advt

ಮೃತರನ್ನು ನಜ್ರಾ (26), ಆಕೆಯ ಮಗಳು ಇಕ್ರಾ (7), ಶೈಫುಲ್ ರೆಹಮಾನ್ (35), ಮೊಹಮ್ಮದ್ ಫೈಜ್ (7 ತಿಂಗಳು), ಪರ್ವೀನ್ (28) ಎಂದು ಗುರುತಿಸಲಾಗಿದೆ. ಶಾರ್ಟ್‌ಸರ್ಕ್ಯೂಟ್‌ನಿಂದಾಗಿ ಬೆಂಕಿ ಅವಘಡ ಸಂಭವಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಕಟ್ಟಡದ ನೆಲಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡು, ಮನೆಯೊಳಗೆ ಸಂಗ್ರಹಿಸಿಟ್ಟಿದ್ದ ಕೆಲವು ಥರ್ಮೋಕೋಲ್, ಫೋಮ್ ವಸ್ತುಗಳ ಸಂಪರ್ಕಕ್ಕೆ ಬಂದಾಗ ಬೆಂಕಿ ವೇಗವಾಗಿ ಹರಡಿತು ಎನ್ನಲಾಗಿದೆ.ದುರಂತದಲ್ಲಿ ಮೃತಪಟ್ಟ ನಿವಾಸಿಗಳು ಮೊದಲ ಮತ್ತು ಎರಡನೇ ಮಹಡಿಗಳಲ್ಲಿ ಸಿಕ್ಕಿಕೊಂಡಿದ್ದರು. ಅಗ್ನಿಶಾಮಕ ದಳ ಬೆಂಕಿಯನ್ನು ನಂದಿಸಿದ್ದಾರೆ. ಈ ಬಗ್ಗೆ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Related Articles

Back to top button