Election NewsKannada NewsNationalPolitics

*ಕಾಲ್ತುಳಿತಕ್ಕೆ ನಟ ವಿಜಯ್ ಅಲ್ಲ ಸರ್ಕಾರವೇ ಕಾರಣ: ಅಣ್ಣಾಮಲೈ*

ಪ್ರಗತಿವಾಹಿನಿ ಸುದ್ದಿ: ಕರೂರು ಕಾಲ್ತುಳಿತದ ಬಗ್ಗೆ ತಮಿಳುನಾಡು ಬಿಜೆಪಿ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಪ್ರತಿಕ್ರಿಯಿಸಿದ್ದು, ವಿಜಯ್ ಅವರನ್ನು ದೂಷಿಸಲು ಸಾಧ್ಯವಿಲ್ಲ. ಇದು ತಮಿಳುನಾಡು ಪೊಲೀಸರ ಭದ್ರತಾ ಲೋಪ ಮತ್ತು ಇಂಟೆಲಿಜೆನ್ಸ್ ವೈಫಲ್ಯ ಎಂದು ಆರೋಪಿಸಿದ್ದಾರೆ.

ಸೆ.26 ರಂದು ತಮಿಳುನಾಡಿನ ಕರೂರಿನಲ್ಲಿ ನಟ-ರಾಜಕಾರಣಿ ವಿಜಯ್ ಅವರ ಪಕ್ಷದ ಪ್ರಚಾರದ ರ್ಯಾಲಿ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 40 ಜನರು ನ್ನಪ್ಪಿದ್ದರು. ನೂರಾರು ಜನರು ಗಾಯಗೊಂಡಿದ್ದರು.  ಟಿವಿಕೆ ನಾಯಕ ವಿಜಯ್ ಅವರ ರ್ಯಾಲಿ ಸಂದರ್ಭದಲ್ಲಿ ನಡೆದ ಕಾಲ್ತುಳಿತ ದುರಂತಕ್ಕೆ ಸಂಬಂಧಪಟ್ಟಂತೆ ಅಣ್ಣಾಮಲೈ ಪ್ರತಿಕ್ರಿಯೆ ನೀಡಿದ್ದಾರೆ.‌

ತಮಿಳುನಾಡು ಪೊಲೀಸರು ರ್ಯಾಲಿಗೆ 7 ಗಂಟೆಗಳ ಕಾಲ ಅನುಮತಿ ನೀಡಿದ್ದು ಏಕೆ? 2 ಗಂಟೆಗಳ ಕಾಲ ಅವಕಾಶ ನೀಡಬೇಕಿತ್ತು. ಇನ್ನು ಈ ದುರಂತದ ಬಗ್ಗೆ ಕೇಂದ್ರ ತನಿಖಾ ದಳ (ಸಿಬಿಐ) ತನಿಖೆ ನಡೆಸಬೇಕೆಂದು ಅಣ್ಣಾಮಲೈ ಒತ್ತಾಯಿಸಿದ್ದಾರೆ.

ಘಟನೆ ನಡೆದಾಗ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ವಿಜಯ್ ಅವರನ್ನು ನಾನು ನೇರವಾಗಿ ಆರೋಪಿಸುತ್ತಿಲ್ಲ ಅಥವಾ ಹೊಣೆಗಾರರನ್ನಾಗಿ ಮಾಡುವುದಿಲ್ಲ ಎಂದಿದ್ದಾರೆ.

Home add -Advt

Related Articles

Back to top button