Kannada NewsKarnataka NewsNationalPolitics

ನಿಯಂತ್ರಣ ಕಳೆದುಕೊಂಡ ಅಮಿತ್ ಶಾ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್

ಪ್ರಗತಿವಾಹಿನಿ‌ ಸುದ್ದಿ: ಲೋಕಸಭಾ ಚುನಾವಣೆ ಪ್ರಚಾರದ ನಿಮಿತ್ಯ ಬಿಹಾರಕ್ಕೆ ತೆರಳಿದ್ದ ವೇಳೆ ಅಮಿತ್ ಶಾ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ದಿಢೀರ್ ನಿಯಂತ್ರಣ ಕಳೆದುಕೊಂಡಿದ್ದು, ಅಮಿತ್ ಶಾ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬಿಹಾರದ ಬೆಗೂಸರೈನಲ್ಲಿ ಆಯೋಜಿಸಿದ್ದ ಬೃಹತ್ ಸಮಾವೇಶದಲ್ಲಿ ಅಮಿತ್ ಶಾ ಪಾಲ್ಗೊಂಡು ವಾಪಸ್ ಹೋಗುವಾಗ ಹೆಲಿಕಾಪ್ಟರ್ ಟೇಕ್ ಆಫ್ ಆಗುತ್ತಿದ್ದಂತೆ ಹಠಾತ್ತನೆ ನಿಯಂತ್ರಣ ತಪ್ಪಿ ಭಾರೀ ಭೀತಿ ಉಂಟು ಮಾಡಿದೆ.

ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಹೆಲಿಕಾಪ್ಟರ್ ಪೈಲೆಟ್ ನ ನಿಯಂತ್ರಣ ಕಳೆದುಕೊಂಡಿದೆ. ಕೆಲ ಕಾಲ ಆಗಸದಲ್ಲಿ ತಿರುಗಿದೆ. ನಂತರ ಹೆಲಿಕಾಪ್ಟರ್ ನ್ನು ನಿಯಂತ್ರಣಕ್ಕೆ ಪಡೆದ ಪೈಲೆಟ್ ಅಲ್ಲಿಂದ ಹೊರಟಿದ್ದಾರೆ. ಈ ಘಟನೆ ಎಲ್ಲರಲ್ಲೂ ಒಂದು ಕ್ಷಣ ಆತಂಕಕ್ಕೆ ತಳ್ಳಿತ್ತು. 

Home add -Advt

Related Articles

Back to top button