Kannada NewsLatest

ಮಾಧ್ಯಮಗಳ ಪ್ರಭಾವ ಎಂದಿಗೂ ಕುಗ್ಗಲು ಸಾಧ್ಯವಿಲ್ಲ – ಎಂ.ಕೆ.ಹೆಗಡೆ

ಪ್ರಗತಿವಾಹಿನಿ ಸುದ್ದಿ, ಶಿರಸಿ – ಮಾಧ್ಯಮಗಳ ಸ್ವರೂಪ ಬದಲಾದರೂ ಮಾಧ್ಯಮ ಕ್ಷೇತ್ರದ ಭವಿಷ್ಯಕ್ಕೆ ಆತಂಕವಿಲ್ಲ. ಮಾಧ್ಯಮಗಳು ದಿನದಿಂದ ದಿನಕ್ಕೆ ಪ್ರಭಾವಶಾಲಿಯಾಗಿ ಬೆಳೆಯುತ್ತಿವೆ ಎಂದು ಹಿರಿಯ ಪತ್ರಕರ್ತ, ಪ್ರಗತಿವಾಹಿನಿ ಡಾಟ್ ಕಾಂ ಪ್ರಧಾನ ಸಂಪಾದಕ ಎಂ.ಕೆ. ಹೆಗಡೆ ಹೇಳಿದ್ದಾರೆ.

ಪತ್ರಿಕಾ ದಿನಾಚರಣೆ ಹಿನ್ನೆಲೆಯಲ್ಲಿ ಈಚೆಗೆ ತಾಲೂಕಿನ ಹೆಗಡೆಕಟ್ಟಾ ಶ್ರೀ ಗಜಾನನ ಸೆಕೆಂಡರಿ ಸ್ಕೂಲ್ ನಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಅವರು ಮಾತನಾಡುತ್ತಿದ್ದರು. ಎಲ್ಲ ಕ್ಷೇತ್ರಗಳಂತೆ ಮಾಧ್ಯಮಗಳ ಸ್ವರೂಪ ಸಹ ಕಾಲಕಾಲಕ್ಕೆ ಬದಲಾಗುತ್ತ ಸಾಗುತ್ತಿವೆ. ಸಧ್ಯಕ್ಕೆ ಮುದ್ರಣ ಮಾಧ್ಯಮ, ಎಲೆಕ್ಟ್ರಾನಿಕ್ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮಗಳು ಜೊತೆಯಾಗಿ ಮುನ್ನಡೆಯುತ್ತಿವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕ್ರಾಂತಿಗಳಾಗಬಹುದು. ಏನೇ ಆದರೂ ಮಾಧ್ಯಮ ತನ್ನ ಪ್ರಭಾವವನ್ನು ಕಳೆದುಕೊಳ್ಳಲು ಸಾಧ್ಯವಿಲ್ಲ ಎಂದು ಅವರು ವಿವರಿಸಿದರು.

ರಾಷ್ಟ್ರ, ರಾಜ್ಯದಲ್ಲಿ ನಡೆಯುತ್ತಿರುವ ಸಾಕಷ್ಟು ಭ್ರಷ್ಟಾಚಾರ, ಹಗರಣಗಳನ್ನು ಮಾಧ್ಯಮಗಳು ಬಯಲಿಗೆ ತರುತ್ತಿವೆ. ಆದರೆ ಮಾಧ್ಯಮಗಳಿಗೂ ಇತಿ ಮಿತಿ ಇರುತ್ತವೆ. ಹಾಗಾಗಿ ಸಾರ್ವಜನಿಕರೂ ಮಾಧ್ಯಮಗಳ ಜೊತೆಗೆ ಸಕ್ರೀಯವಾಗಿ ಕೈಜೋಡಿಸಿದಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾಧ್ಯವಿದೆ ಎಂದೂ ಅವರು ತಿಳಿಸಿದರು.

ಪತ್ರಿಕೋದ್ಯಮ ಕ್ಷೇತ್ರದಲ್ಲಿ ಭವಿಷ್ಯದಲ್ಲಿ ಇರುವ ಅವಕಾಶಗಳ ಬಗ್ಗೆ ಬೆಳಕು ಚೆಲ್ಲಿದ ಅವರು, ಸಂವಾದ ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮದ ವಿಭಾಗಗಳು ಯಾವವು ? ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸಲು ಬೇಕಾದ ವಿದ್ಯಾರ್ಹತೆಗಳೇನು ? ಪತ್ರಕರ್ತ ಎದುರಿಸಬೇಕಾದ ಸವಾಲುಗಳೇನು? ಪತ್ರಕರ್ತನಿಗೆ ಇರಬೇಕಾದ ಗುಣಗಳೇನು ? ಹೀಗೆ ವಿದ್ಯಾರ್ಥಿಗಳು ಕೇಳಿದ ಹತ್ತು ಹಲವು ರೀತಿಯ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರ ನೀಡುವ ಮೂಲಕ ಮಕ್ಕಳ ಅನುಮಾನ ಬಗೆಹರಿಸಿ, ಪತ್ರಿಕಾ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ಆಸಕ್ತಿ ಮೂಡಲು ಕಾರಣರಾದರು.

ಮಾಧ್ಯಮ ಕ್ಷೇತ್ರದಲ್ಲಿ ಭವಿಷ್ಯವನ್ನು ಕಂಡುಕೊಳ್ಳಲು ಆಸಕ್ತಿ ಇದ್ದರೆ ಸಾಕಷ್ಟು ಅವಕಾಶಗಳಿವೆ. ಶುದ್ಧವಾದ ಬರವಣಿಗೆ, ಮಾತಿನಲ್ಲಿ ಹಿಡಿತ, ಬದಲಾವಣೆಗೆ ತಕ್ಕಂತೆ ಕೌಶಲ್ಯ ವೃದ್ಧಿ, ಜಾಗತಿಕ ಬದಲಾವಣೆಗಳಿಗೆ ತಕ್ಕಂತೆ ಜ್ಞಾನವನ್ನು ನಿರಂತರವಾಗಿ ಹೆಚ್ಚಿಸಿಕೊಳ್ಳುತ್ತ ಸಾಗಿದಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ಯಶಸ್ವಿಯಾಗಬಹುದು ಎಂದ ಎಂ.ಕೆ.ಹೆಗಡೆ, ತಮ್ಮ ಪ್ರಗತಿ ಮೀಡಿಯಾ ಹೌಸ್ ಮೂಲಕ ಆಸಕ್ತರಿಗೆ ತರಬೇತಿ, ಮಾರ್ಗದರ್ಶನ ನೀಡಲು ಸಿದ್ಧ ಎಂದರು.

ಪ್ರೌಢ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಎಂ.ಆರ್.ಹೆಗಡೆ, ಹೊನ್ನೆಕಟ್ಟಾ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಜಿ.ಎನ್.ಹೆಗಡೆ, ಮರಿಯಜ್ಜನ್, ಸದಸ್ಯ ವಿಶ್ವನಾಥ ಹೆಗಡೆ, ಶೀಗೆಹಳ್ಳಿ ವೇದಿಕೆಯಲ್ಲಿದ್ದರು. ಮುಖ್ಯಾಧ್ಯಾಪಕ ಶೈಲೇಂದ್ರ ಎಂ.ಎಚ್. ಸ್ವಾಗತಿಸಿದರು. ಶಿಕ್ಷಕ ಆರ್.ಎನ್.ಹೆಗಡೆ ನಿರೂಪಿಸಿದರು. ಶಿಕ್ಷಕ ಕೆ.ಎನ್.ನಾಯ್ಕ್ ವಂದಿಸಿದರು.

ಪತ್ನಿಗೆ ಸುಳ್ಳುಹೇಳಿ ಪ್ರಿಯತಮೆ ಭೇಟಿಗೆ ಮಾಲ್ಡೀವ್ಸ್ ಗೆ ತೆರಳಿದ್ದ ಎಂಜಿನಿಯರ್ ಜೈಲುಪಾಲು; ಕಳ್ಳಾಟ ಮುಚ್ಚಿಡಲು ಪಾಸ್ ಪೋರ್ಟ್ ಪುಟಗಳನ್ನೇ ಹರಿದುಹಾಕಿದ !

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button