Latest

ದೇಶದ ಅತಿದೊಡ್ಡ ಕನ್ವೆನ್ಷನ್ ಸೆಂಟರ್ ಶ್ರೀಘ್ರದಲ್ಲೇ ಆರಂಭ ; ಜಿಯೋ ವರ್ಲ್ಡ್ ಸೆಂಟರ್ ವಿಶೇಷತೆ ಏನು?

ಪ್ರಗತಿವಾಹಿನಿ ಸುದ್ದಿ, ಮುಂಬೈ – ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ದೇಶದ ಅತಿದೊಡ್ಡ  ಜಿಯೋ ವರ್ಲ್ಡ್ ಸೆಂಟರ್ ತೆರೆಯುವುದಾಗಿ ಇಂದು ಘೋಷಿಸಿದೆ.

ಜಿಯೋ ವರ್ಲ್ಡ್ ಸೆಂಟರ್ ಭಾರತದಲ್ಲಿ ಸಾಂಸ್ಕೃತಿಕ ಕೇಂದ್ರವಾಗಲಿದೆ. ಜಿಯೋ ವರ್ಲ್ಡ್ ಸಂಗೀತ ಕಾರಂಜಿ, ಉನ್ನತ ಮಟ್ಟದ ರಿಟೇಲ್ ವ್ಯವಸ್ಥೆ, ಕೆಫೆಗಳು ಮತ್ತು ಉತ್ತಮ ರೆಸ್ಟೋರೆಂಟ್​​ಗಳು, ಸರ್ವಿಸ್ ಅಪಾರ್ಟ್ಮೆಂಟ್​​ಗಳು ಮತ್ತು ಕಚೇರಿಗಳು, ಉತ್ತಮ ಸೌಲಭ್ಯಗಳನ್ನು ಒಳಗೊಂಡಿರುವ ಭಾರತದ ಮೊದಲ ತಾಣ ಆಗಲಿದೆ. ಮುಂಬೈ ಹೆಗ್ಗುರುತಾಗಿ ಪ್ರವಾಸಿ ತಾಣವೂ ಆಗಲಿದೆ.

ರಿಲಯನ್ಸ್ ಇಂಡಸ್ಟ್ರೀಸ್ ನಿರ್ದೇಶಕಿ ಮತ್ತು ರಿಲಯನ್ಸ್ ಫೌಂಡೇಷನ್​​ನ  ಅಧ್ಯಕ್ಷೆ ನೀತಾ ಅಂಬಾನಿ ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್​​ನಲ್ಲಿ 18.5 ಎಕರೆ ವಿಸ್ತಾರವಾದ ಪ್ರದೇಶವನ್ನು ಜಿಯೋ ವರ್ಲ್ಡ್ ಸೆಂಟರ್ ಮಾಡಲಿದ್ದಾರೆ.‌

ಎಂಟು ಫೈರ್ ಶೂಟರ್​​ಗಳು, 392 ವಾಟರ್ ಜೆಟ್​ಗಳು ಮತ್ತು 600ಕ್ಕೂ ಹೆಚ್ಚು ಎಲ್‌ಇಡಿ ದೀಪಗಳು ಇಲ್ಲಿ ನಿರ್ಮಾಣಗಲಿರುವ ಸಂಗೀತ ಕಾರಂಜಿಯಲ್ಲಿರಲಿದೆ.

Home add -Advt

ಮತ್ತೊಂದು ವಿಶೇಷವೆಂದರೆ ಇಲ್ಲಿ  5,000 ಕಾರುಗಳ ನಿಲುಗಡೆಗೆ ಸಾಮರ್ಥ್ಯವಿರುವ ಕನ್ವೆನ್ಷನ್​ ಸೆಂಟರ್ ಇರಲಿದ್ದು, ಇದು ಭಾರತದ ಅತಿದೊಡ್ಡ ಆನ್-ಸೈಟ್ ಪಾರ್ಕಿಂಗ್ ಆಗಲಿದೆ. ಇಂಡಿಯಾ ಆಕ್ಸೆಂಟ್​ನಂಥ ವಿಶ್ವ ದರ್ಜೆಯ ಶಾಪಿಂಗ್ ಅನುಭವ ಮತ್ತು ಐಷಾರಾಮಿ ಬ್ರಾಂಡ್​ಗಳು ಲಭ್ಯವಿರಲಿವೆ. ಈ ಎಲ್ಲಾ ವ್ಯವಸ್ಥೆಗಳೊಂದಿಗೆ 2023ರಲ್ಲಿ ಆರಂಭವಾಗಲಿದೆ.

ಅಮೇರಿಕ, ಇಂಗ್ಲೆಂಡ್ ಧ್ವಜ ಕಿತ್ತೆಸೆದು ಭಾರತದ ಧ್ವಜ ಉಳಿಸಿಕೊಂಡ ರಷ್ಯಾ

Related Articles

Back to top button